ಡೈರೆಕ್ಟರ್, ಹೀರೋಯಿನ್ ಎಲ್ಲಾ ಫಿಕ್ಸ್: ಹಾಗಿದ್ದರೂ ಯಶ್ 19 ಸಿನಿಮಾ ಘೋಷಣೆ ಯಾಕಾಗಿಲ್ಲ?!

ಗುರುವಾರ, 14 ಸೆಪ್ಟಂಬರ್ 2023 (08:10 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಯಾವುದು ಎಂಬ ಬಗ್ಗೆ ಅಭಿಮಾನಿಗಳಲ್ಲೂ ಕುತೂಹಲವಿದೆ. ಆದರೆ ಇದುವರೆಗೆ ಹೊಸ ಸಿನಿಮಾ ಘೋಷಣೆಯಾಗಿಲ್ಲ.

ಆದರೆ ಯಶ್ 19 ಬಗ್ಗೆ ಈಗ ಹಲವು ಸುದ್ದಿಗಳು ಹರಿದಾಡುತ್ತಿವೆ. ಯಶ್19 ಸಿನಿಮಾ ಕತೆ, ನಿರ್ಮಾಣ, ಪಾತ್ರವರ್ಗ ಎಲ್ಲವೂ ಫೈನಲ್ ಆಗಿದೆ. ಆದರೆ ಘೋಷಣೆ ಮಾಡಲು ಒಂದೊಳ್ಳೆ ದಿನಕ್ಕಾಗಿ ಕಾಯುತ್ತಿದ್ದಾರೆ. ಹೀಗಾಗಿ ಗಣೇಶ ಹಬ್ಬಕ್ಕೆ ಯಶ್ ಕಡೆಯಿಂದ ಸಿಹಿ ಸುದ್ದಿ ಸಿಗಬಹುದು ಎಂಬುದು ಅಭಿಮಾನಿಗಳ ಲೆಕ್ಕಾಚಾರ.

ಸದ್ಯದ ಮಾಹಿತಿ ಪ್ರಕಾರ ಯಶ್ ಗೋವಾ ಡ್ರಗ್ ಮಾಫಿಯಾ ಬಗ್ಗೆ ಸಿನಿಮಾ ಮಾಡಲಿದ್ದಾರೆ. ಇದಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಲಿದೆ. ಮಲಯಾಳಂನ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳಲಿದ್ದು, ಸಂಯುಕ್ತ ಮೆನನ್ ನಾಯಕಿ ಎಂಬ ಸುದ್ದಿಯಿದೆ. ಅಲ್ಲದೆ, ವಿಲನ್ ಪಾತ್ರವೂ ಫೈನಲ್ ಆಗಿದೆ ಎನ್ನಲಾಗುತ್ತಿದೆ. ಈಗ ಅಧಿಕೃತ ಘೋಷಣೆಯೊಂದೇ ಬಾಕಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ