Gagan Chinnappa: ದರ್ಶನ್ ತಾಯಿ ನನಗೆ ತುಂಬಾ ಕ್ಲೋಸ್, ನನಗೊಬ್ಬ ಹುಡುಗಿ ಹುಡುಕಿದ್ರು: ಗಗನ್ ಚಿನ್ನಪ್ಪ
ಸೀತಾರಾಮ ಧಾರವಾಹಿ ಮುಗಿದ ಬೆನ್ನಲ್ಲೇ ಗಗನ್ ಚಿನ್ನಪ್ಪ ಎಫ್ ಡಿಎಫ್ಎಸ್ ಕನ್ನಡ ಚಾನೆಲ್ ಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಗಗನ್ ತಮ್ಮ ಜೀವನದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಶಾಲಾ ದಿನಗಳಿಂದಲೇ ತಮಗೆ ದರ್ಶನ್ ಕುಟುಂಬದ ಜೊತೆಗಿದ್ದ ಆತ್ಮೀಯತೆ ಬಗ್ಗೆ ಅಚ್ಚರಿಯ ವಿಚಾರಗಳನ್ನು ಹೊರಹಾಕಿದ್ದಾರೆ.
ಗಗನ್ ಚಿನ್ನಪ್ಪ ಮೂಲತಃ ಕೊಡಗಿನವರು. ದರ್ಶನ್ ಸರ್ ನನಗೆ ಶಾಲಾ ದಿನಗಳಿಂದಲೇ ಗೊತ್ತು. ದರ್ಶನ್ ಅವರ ತಾಯಿ ಮೀನಾ ತೂಗುದೀಪ ಆಂಟಿ ನಮಗೆ ತುಂಬಾ ಕ್ಲೋಸ್. ಅವರ ಮನೆಗೆ ನಮ್ಮ ತೋಟದಿಂದಲೇ ಪ್ರತೀ ವರ್ಷ ಬೆಣ್ಣೆ ಹಣ್ಣು ಹೋಗೋದು. ದರ್ಶನ್ ಸರ್, ನಾನು ಒಂದೇ ಜಿಮ್ ಗೆ ಹೋಗ್ತಿದ್ದಿದ್ದು.
ನಾನು ತುಂಬಾ ತರ್ಲೆ. ದರ್ಶನ್ ಸರ್ ಹತ್ರ ಒಂದು ಪ್ಯಾರೆಟ್ ಇತ್ತು. ಅದನ್ನು ನನಗೆ ಛೂ ಬಿಡ್ತಾ ಇದ್ರು ಕಚಕ್ಕೆ ಅಂತ. ಅಷ್ಟು ತರ್ಲೆ ನಾನು. ಆಂಟಿ ನಮ್ಮ ಸೀರಿಯಲ್ ನ ನೋಡ್ತಾ ಇದ್ರು. ಅವರು ಬಿಗ್ಗೆಸ್ಟ್ ಫ್ಯಾನ್ ಆಗಿದ್ರು. ಈಗಲೂ ಕಾಲ್ ಮಾಡಿದ್ರೆ 15 ನಿಮಿಷ ಎಲ್ಲಾ ಆರಮಾಗೇ ಮಾತಾಡ್ತಾರೆ. ನನ್ನನ್ನು ಮಗ ಅಂತಾನೇ ಮಾತಾಡಿಸ್ತಾರೆ ಎಂದು ಗಗನ್ ಹೇಳಿದ್ದಾರೆ.