Kamal Hassan: ಥಗ್ಸ್ ಆಫ್ ಲೈಫ್ ಕನ್ನಡದಲ್ಲೇ ಇಲ್ಲ: ಶಿವಣ್ಣನ ಕರೆಸಿ ಕಮಲ್ ಕನ್ನಡಕ್ಕೆ ಅವಮಾನ ಮಾಡಿದ್ದೇಕೆ
ಜೂನ್ 5 ಕ್ಕೆ ಬಹುಭಾಷೆಗಳಲ್ಲಿ ಕಮಲ್ ಹಾಸನ್ ನಾಯಕರಾಗಿರುವ ಥಗ್ಸ್ ಆಫ್ ಲೈಫ್ ಸಿನಿಮಾ ಬಿಡುಗಡೆಯಾಗುತ್ತಿದೆ. ಆದರೆ ಕನ್ನಡದಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿಲ್ಲ ಎನ್ನಲಾಗಿದೆ. ಹಾಗಿದ್ದರೆ ಶಿವಣ್ಣನನ್ನು ಕಾರ್ಯಕ್ರಮಕ್ಕೆ ಕರೆಸಿ ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದೆಲ್ಲಾ ಪುಕ್ಸಟೆ ಪ್ರಚಾರ ಪಡೆಯಲಾ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.
ಪರಭಾಷಾ ಸಿನಿಮಾಗಳನ್ನು ಕನ್ನಡ ಸಿನಿಮಾಗಳನ್ನು ಕಡೆಗಣಿಸುತ್ತಲೇ ಇರುವುದು ಹೊಸದೇನಲ್ಲ. ಥಗ್ಸ್ ಆಫ್ ಲೈಫ್ ಸಿನಿಮಾವಂತೂ ಕನ್ನಡದಲ್ಲಿ ರಿಲೀಸ್ ಮಾಡುವ ಯೋಜನೆಯೇ ಇರಲಿಲ್ಲ ಎನ್ನಲಾಗಿದೆ. ಹಾಗಿದ್ದರೆ ಇದಕ್ಕೆ ಇಲ್ಲಿ ಪ್ರಮೋಷನ್ ಅಗತ್ಯವಿತ್ತೇ ಎನ್ನುವುದು ನೆಟ್ಟಿಗರ ಆಕ್ಷೇಪವಾಗಿದೆ.
ಹಾಗಿದ್ದರೆ ಕಮಲ್ ತಮ್ಮ ಸಿನಿಮಾ ಪ್ರಚಾರಕ್ಕೆ ಕನ್ನಡ ವಿವಾದವನ್ನು ಬಳಸಿಕೊಂಡರೇ ಎಂಬ ಅನುಮಾನ ಬರದೇ ಇರದು. ಇಂತಹ ಕಾರ್ಯಕ್ರಮಕ್ಕೆ ನೀವು ಯಾಕೆ ಹೋದಿರಿ ಎಂದು ಶಿವಣ್ಣನ ಮೇಲೂ ಜನ ಸಿಟ್ಟಾಗಿದ್ದಾರೆ.