ಒಲವಿನ ಡ್ರೋನ್ ಹಾರಿಸಲು ಭರ್ಜರಿ ಬ್ಯಾಚುಲರ್ಸ್‌ಗೆ ಎಂಟ್ರಿಕೊಟ್ಟ ಪ್ರತಾಪ್‌

Sampriya

ಬುಧವಾರ, 19 ಫೆಬ್ರವರಿ 2025 (18:02 IST)
Photo Courtesy X
ಬೆಂಗಳೂರು: ಸೈನ್ಸ್‌ ವಿಡಿಯೋ ಹೆಸರಿನಲ್ಲಿ ವಿಡಿಯೋ ಮಾಡಿ ಯಡವಟ್ಟು ಮಾಡಿಕೊಂಡು ಜೈಲು ಸೇರಿ ಸುದ್ದಿಯಾಗಿದ್ದ ಮಾಜಿ ಬಿಗ್‌ಬಾಸ್ ಪ್ರತಾಪ್ ಅವರು ಇದೀಗ ರಿಯಾಲಿಟಿ ಶೋಗೆ ವಾಪಾಸ್ಸಾಗಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಭರ್ಜರಿ ಬ್ಯಾಚುಲರ್ ಸೀಸನ್‌ಗೆ ಡ್ರೋನ್ ಪ್ರತಾಪ್ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದಾರೆ. ಒಂದಲ್ಲ ಒಂದು ಸುದ್ದಿಯಲ್ಲಿರುವ ಡ್ರೋನ್ ಪ್ರತಾಪ್ ಇದೀಗ ಮತ್ತೇ ಮನರಂಜನೆ ಲೋಕಕ್ಕೆ ವಾಪಾಸ್ಸಾಗಿದ್ದಾರೆ.

ಈ ವೇಳೆ ನಿರೂಪಕ ನಿರಂಜನ್ ದೇಶಪಾಂಡೆ ಅವರು ಬ್ರೇಕಿಂಗ್‌ ನ್ಯೂಸ್‌ನಲ್ಲಿರುವವರು  ಇದೀಗ ಸೆನ್ಸೇಷನಲ್ ನ್ಯೂಸ್ ಮಾಡಲು ಹೊರಟಿದ್ದಾರೆ. ಭರ್ಜರಿ ಬ್ಯಾಚುಲರ್ಸ್‌ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಹೊಸ ವಿಷಯ ಮಾಡಕ್ಕೆ ಹಾರ್ಮೋನ್ ರಶ್ ಆಗುತ್ತೆ ಎಂದಿದ್ದಾರೆ. ಈ ವೇಳೆ ಪ್ರತಾಪ್‌ ಅವರು ಮಹಿಳಾ ಸ್ಪರ್ಧಿಗಳ ಜತೆ ಮಾತನಾಡಲು ನಾಚಿ ನೀರಾಗಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ