ದರ್ಶನ್ ಮಾತಾಡೋವರೆಗೂ ಇದೊಂದು ಕೆಲಸ ಮಾಡಲ್ವಂತೆ ಪ್ರಥಮ್

Sampriya

ಮಂಗಳವಾರ, 29 ಜುಲೈ 2025 (15:41 IST)
Photo Credit X
ಬೆಂಗಳೂರು: ಅಶ್ಲೀಲ ಮೆಸೇಜ್ ಹಾಗೂ ಬೆದರಿಕೆ ಸಂಬಂಧ ನಟ ದರ್ಶನ್ ಫ್ಯಾನ್ಸ್ ವಿರುದ್ಧ ನಟಿ ರಮ್ಯಾ ಠಾಣೆ ಮೆಟ್ಟಿಲೇರಿದ ಬೆನ್ನಲ್ಲೇ ಇದೀಗ ನಟ ಪ್ರಥಮ್ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ. 

ದರ್ಶನ್ ಫ್ಯಾನ್ಸ್‌ ಬೆದರಿಕೆ ಸಂಬಂಧ ಪ್ರಥಮ್ ಇದೀಗ ದೂರು ನಿಡಿದ್ದಾರೆ. ಅದಲ್ಲದೆ ಈ ವಿಚಾರವಾಗಿ ನಟ ದರ್ಶನ್ ಅವರು ಸ್ಪಷ್ಟನೆ ನೀಡುವವರೆಗೂ ಅಮರಣಾಂತ ಉಪವಾಸ ಕೈಗೊಳ್ಳುವುದಾಗಿ ಹೇಳಿದ್ದಾರೆ. 

ದರ್ಶನ್ ಫ್ಯಾನ್ಸ್‌ ಕಡೆಯಿಂದ ಅಶ್ಲೀಲ ಮೆಸೇಜ್ ಹಾಗೂ ಬೆದರಿಕೆ ಸಂಬಂಧ ನಟಿ ರಮ್ಯಾ ಅವರು ನಿನ್ನೆ ಸಂಜೆ ಪೊಲೀಸ್‌ ಕಮಿಷನರ್‌ಗೆ ದೂರು ನೀಡಿದ್ದರು. 43 ಅಕೌಂಟ್ಸ್‌ಗಳಿಂದ ಬೆದರಿಕೆ ಹಾಗೂ ಅಶ್ಲೀಲ ಮೆಸೇಜ್‌ಗಳು ಬಂದಿರುವುದಾಗಿ ನಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ಅದರ ಬೆನ್ನಲ್ಲೇ ಇದೀಗ ಪ್ರಥಮ್  ಕೂಡಾ ಪೊಲೀಸ್ ಕಮಿಷನರ್‌ಗೆ ಭೇಟಿ ನೀಡಿ ದೂರು ನೀಡಿದ್ದಾರೆ. ಈ ವಿಚಾರವಾಗಿ ದರ್ಶನ್ ಬಂದು ಸ್ಪಷ್ಟನೆ ನೀಡುವವರೆಗೂ ಅಮರಣಾಂತ ಉಪವಾಸ ಮಾಡುವುದಾಗಿ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ