'ಹುಟ್ಟುಹಬ್ಬದ ಶುಭಶಯಗಳು ಅಮ್ಮ': ಅತ್ತೆಗೆ ಮುದ್ದಾಗಿ ವಿಶ್ ಮಾಡಿದ ಅಲಿಯಾ ಭಟ್
ಈ ಚಿತ್ರವು ಆಲಿಯಾ ಭಟ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ತೆಗೆದಿದ್ದು, ಇದರಲ್ಲಿ ನೀತು ಕಪೂರ್ ಬಿಳಿ ಬಣ್ಣದ ಡ್ರೆಸ್‌ನಲ್ಲಿ ಸೊಗಸಾಗಿ ಕಾಣುತ್ತಿದ್ದರು. "ಹುಟ್ಟುಹಬ್ಬದ ಶುಭಾಶಯಗಳು ಮಾಮ್! ನನ್ನ ಶಕ್ತಿ, ಶಾಂತಿ ಮತ್ತು ಎಲ್ಲಾ ವಸ್ತುಗಳ ಫ್ಯಾಷನ್.. ಲವ್ ಯೂ ಟು ದಿ ಮೂನ್ ಆಂಡ್ ಬ್ಯಾಕ್ ಎಂದು ಬರೆದುಕೊಂಡಿದ್ದಾರೆ.
ನೀತು ಕಪೂರ್ ಅವರು ತನ್ನ ಮಗಳು ರಿದ್ಧಿಮಾ ಕಪೂರ್ ಸಾಹ್ನಿ, ಅಳಿಯ ಭರತ್ ಸಾಹ್ನಿ ಮತ್ತು ಮೊಮ್ಮಗಳು ಸಮೈರಾ ಅವರೊಂದಿಗೆ ಸ್ವಿಟ್ಜರ್ಲೆಂಡ್‌ನಲ್ಲಿ ತಮ್ಮ 66 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ