ಈ ಬೆಡಗಿಗೆ ಜನ್ಮದಿನದಂದೂ ಅವರದ್ದೇ ಚಿಂತೆಯಂತೆ!

ಭಾನುವಾರ, 23 ಆಗಸ್ಟ್ 2020 (15:23 IST)
ಬಾಲಿವುಡ್ ನ ಹಾಟ್ ಬೆಡಗಿಗೆ ತನ್ನ ಜನ್ಮದಿನದಂದೂ ಅವರದ್ದೇ ಚಿಂತೆ ಕಾಡುತ್ತಿದೆಯಂತೆ.

ಬೆಲ್ ಬಾಟಮ್ ಸಿನಿಮಾದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆಗೆ ನಟಿಸುತ್ತಿರುವ ನಟಿ ವಾಣಿ ಕಪೂರ್ ಇವತ್ತು ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ.

32 ನೇ ವರ್ಷಕ್ಕೆ ಕಾಲಿಡುತ್ತಿರುವ ಬೆಡಗಿ ವಾಣಿ ಕಪೂರ್ ಗೆ ತಂದೆ, ತಾಯಿ, ಸಹೋದರಿಯ ನೆನಪು ಬಹಳ ಕಾಡುತ್ತಿದೆಯಂತೆ.

ತಂದೆ ಶಿವ, ತಾಯಿ ಡಿಂಪಿ ಕಪೂರ್ ಹಾಗೂ ಸಹೋದರಿ ನೂಪುರ್ ಚೋಪ್ರಾ ಜೊತೆಗೆ ಮುಂದಿನ ವರ್ಷ ಅದ್ಧೂರಿಯಾಗಿ ಜನ್ಮ ದಿನ ಆಚರಣೆ ಮಾಡಿಕೊಳ್ಳುವುದಾಗಿ ನಟಿ ವಾಣಿ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ