ಹೊಸ ವರ್ಷಕ್ಕೆ ಬೇಬಿ ಬಂಪ್ ಪೋಟೋಶೂಟ್ ಹಂಚಿಕೊಂಡ ಹರಿಪ್ರಿಯಾ, ಮರಿಸಿಂಹ ಎಂದ ನೆಟ್ಟಿಗರು

Sampriya

ಬುಧವಾರ, 1 ಜನವರಿ 2025 (19:31 IST)
Photo Courtesy X
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ ಅವರು ಇದೀಗ ಇನ್‌ಸ್ಟಾಗ್ರಾಂನಲ್ಲಿ ಪೋಟೋ ರೀಲ್ಸ್‌ ಅನ್ನು ಶೇರ್ ಮಾಡಿದ್ದಾರೆ. ಹೊಸ ವರ್ಷದ ಖುಷಿಯಲ್ಲಿರುವ ಹರಿಪ್ರಿಯಾ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಪತಿ ಜೊತೆ ಬ್ಲೂ ಹಾಗೂ ವೈಟ್ ಥೀಂನಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಅದಕ್ಕೆ ಹ್ಯಾಪಿ 2025 ಎಂದು ಬರೆದುಕೊಂಡಿದ್ದಾರೆ.

ಪತ್ನಿಯ ಬೇಬಿ ಬಂಪ್ ಹಿಡಿದು ವಸಿಷ್ಠ ಪೋಸ್ ನೀಡಿದ್ದಾರೆ. ಈ ಫೋಟೋಶೂಟ್‌ ನೋಡಿದ ಅಭಿಮಾನಿಗಳು ದಂಪತಿಗಳಿಗೆ ಶುಭಹಾರೈಕೆ ಮಾಡುತ್ತಿದ್ದಾರೆ. 2015 ಮರಿ ಮರಿ ಸಿಂಹ ಬರುತ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ, ಹರಿಪ್ರಿಯಾ ಮತ್ತು ವಸಿಷ್ಠ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಳೆದ ವರ್ಷ ಜ.26ರಂದು ಮೈಸೂರಿನಲ್ಲಿ ಮದುವೆಯಾದರು. ಈ ಮದುವೆಗೆ ಡಾಲಿ ಧನಂಜಯ, ಅಮೃತಾ ಅಯ್ಯಂಗಾರ್, ಶಿವಣ್ಣ ಸೇರಿದಂತೆ ಹಲವು ಭಾಗಿಯಾಗಿ ವಸಿಷ್ಠ ದಂಪತಿಗೆ ಶುಭಕೋರಿದ್ದರು.

ಇದೀಗ ಈ ಜೋಡಿ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ