ಬಿಗ್‌ಬಾಸ್‌ ಮನೆಗೆ ಉಗ್ರಂ ಮಂಜು ಫ್ಯಾಮಿಲಿ ಎಂಟ್ರಿ, ತಮ್ಮನನ್ನು ನೋಡಿ ಕಣ್ಣೀರು ಹಾಕಿದ ಮೋಕ್ಷಿತಾ

Sampriya

ಬುಧವಾರ, 1 ಜನವರಿ 2025 (17:49 IST)
Photo Courtesy X
ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11, 94ನೇ ದಿನಕ್ಕೆ ಕಾಲಿಟ್ಟಿದೆ.  ಇದೀಗ ಹೊಸ ವರ್ಷದ ಸಂಭ್ರಮದಲ್ಲಿರುವ ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಫ್ಯಾಮಿಲಿ ರೌಂಡ್‌ ನೀಡಿ ಅವರ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ.  ನಿನ್ನೆಯ ಎಪಿಸೋಡ್‌ನಲ್ಲಿ ಭವ್ಯ ಗೌಡ, ತ್ರಿವಿಕ್ರಮ್  ಹಾಗೂ  ರಜತ್ ಅವರ ಫ್ಯಾಮಿಲಿ ಮನೆಗೆ ಎಂಟ್ರಿಕೊಟ್ಟಿದ್ದಾರೆ.

ಕೆಲವು ದಿನಗಳ ಬಳಿಕ ತಮ್ಮ ಮನೆಯವರನ್ನು ನೋಡಿ ಭವ್ಯ, ತ್ರಿವಿಕ್ರಮ್ ಹಾಗೂ ರಜತ್ ಎಮೋಷನಲ್ ಆಗಿದ್ದಾರೆ.  ಇದೀಗ ಇಂದು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಮೋಕ್ಷಿತಾ ಪೈ ಹಾಗೂ ಉಗ್ರಂ ಮಂಜು ಅವರ ಫ್ಯಾಮಿಲಿ ಎಂಟ್ರಿ ಕೊಟ್ಟಿದ್ದಾರೆ.

ಮೋಕ್ಷಿತಾ ಪೈ ಅವರು ತಮ್ಮ ಸಹೋದರನನ್ನು ನೋಡಿ ಕಣ್ಣೀರು ಹಾಕಿದ್ದಾರೆ.  ಇದೀಗ ರಿಲೀಸ್ ಆದ ಹೊಸ ಪ್ರೋಮೋದಲ್ಲಿ ಉಗ್ರಂ ಮಂಜು ಕುಟುಂಬಸ್ಥರ ಆಗಮನವಾಗಿದೆ.

ಬಿಗ್​ಬಾಸ್​ ಮನೆಗೆ ಉಗ್ರಂ ಮಂಜು ತಂದೆ ರಾಮೇಗೌಡ ಅವರು ಬಂದು ಮಗನ ಕಣ್ಣೀರು ಒರೆಸಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಹೊಸ ಮಂಜು ತರ ಕಾಣಿಸ್ತಾ ಇದ್ದೀಯಾ ಎಂದಿದ್ದಾರೆ.  ಇನ್ನೂ ಕೆಲವು ಹೊತ್ತುಗಳ ಬಳಿಕ ಮಂಜು ಅವರ ತಾಯಿಯ ಧ್ವನಿ ಕೇಳಿಸಿದೆ. ತಾಯಿಯ ಧ್ವನಿಯನ್ನು ಕೇಳಿಸಿಕೊಳ್ಳುತ್ತಿದ್ದಂತೆ ಉಗ್ರಂ ಮಂಜು ಕಣ್ಣೀರಿಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ