ಕೊರೋನಾ ಸಂಕಷ್ಟಪೀಡಿತರಿಗೆ ಭುವನ್-ಹರ್ಷಿಕಾ ತಮ್ಮ ಸಂಗಡಿಗರೊಂದಿಗೆ ದಿನಸಿ ಕಿಟ್, ಆಹಾರ, ಆಕ್ಸಿಜನ್ ಸೇವೆ ಒದಗಿಸುತ್ತಿದ್ದಾರೆ.
ಇದೀಗ ಈ ಜೋಡಿ ಆರಂಭಿಸಿರುವ ರಾಜ್ಯಾದ್ಯಂತ ಆಕ್ಸಿಜನ್ ಪೂರೈಸುವ ಬಸ್ ಗಳು ಮತ್ತು ಆಹಾರ ಒದಗಿಸುವ ಆಟೋಗಳಿಗೆ ಆರೋಗ್ಯ ಸಚಿವ ಸುಧಾಕರ್ ಚಾಲನೆ ನೀಡಿದ್ದಾರೆ. ಈ ಮೂಲಕ ಈ ಇಬ್ಬರೂ ಕಲಾವಿದರು ಸಮಾಜ ಸೇವೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದ್ದಾರೆ.