ಭುವನ್ ಪೊನ್ನಣ್ಣ ಜೊತೆ ಮದುವೆ ಸುದ್ದಿ ಅಧಿಕೃತಗೊಳಿಸಿದ ಹರ್ಷಿಕಾ ಪೂಣಚ್ಚ
ಇದೀಗ ಹರ್ಷಿಕಾ ತಾಯ್ತ ಸಿನಿಮಾದ ಅಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮದುವೆಯನ್ನು ಖಚಿತಪಡಿಸಿದ್ದಾರೆ. ಆಗಸ್ಟ್ 23 ಮತ್ತು 24 ರಂದು ಕೊಡಗಿನ ಅಂಬತ್ತಿ ಕೊಡವ ಸಮಾಜದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ ಎಂದಿದ್ದಾರೆ. ಹಲವು ವರ್ಷಗಳಿಂದ ಇಬ್ಬರೂ ಜೊತೆಯಲ್ಲೇ ಓಡಾಡುತ್ತಿದ್ದರು. ಇಬ್ಬರೂ ಇದೀಗ ತಮ್ಮ ಪ್ರೀತಿಗೆ ಮದುವೆಯ ಮುದ್ರೆಯೊತ್ತುತ್ತಿದ್ದಾರೆ.