ಮಗನ ಮಾನಹಾನಿ: ಸಚಿವೆ ಸುರೇಖಾ ವಿರುದ್ಧ ದೂರು ನೀಡಿದ ನಟ ನಾಗರ್ಜುನ

Sampriya

ಗುರುವಾರ, 3 ಅಕ್ಟೋಬರ್ 2024 (19:02 IST)
Photo Courtesy X
ಹೈದರಾಬಾದ್: ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನ ಬಗ್ಗೆ ಮಾನಹಾನಿಯಾಗುವ ಹೇಳಿಕೆ ನೀಡಿದ ಸಚಿವೆ ಸುರೇಖಾ ವಿರುದ್ಧ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಾಗಾರ್ಜುನ ಅವರು ದೂರು ದಾಖಲಿಸಿದ್ದಾರೆ.

ಸಮಂತಾ-ನಾಗಚೈತನ್ಯ ವಿಚ್ಛೇದನಕ್ಕೂ ಕೆಟಿಆರ್‌ಗೂ ನೇರ ಸಂಬಂಧವಿದೆ ಎಂದು ಕೊಂಡಾ ಸುರೇಖಾ ಬುಧವಾರ ಆರೋಪ ಮಾಡಿದ್ದರು.

ಬುಧವಾರ ಕೊಂಡಾ ಸುರೇಖಾ ಅವರು ಕೆ.ಟಿ.ರಾಮ ರಾವ್‌ ಡ್ರಗ್ ವ್ಯಸನಿ. ಚಿತ್ರರಂಗದ ಖ್ಯಾತನಾಮರಿಗೆ ಆತ ರೇವ್‌ ಪಾರ್ಟಿ ಆಯೋಜಿಸುತ್ತಿದ್ದರು. ಅವರ ದೌರ್ಜನ್ಯ ಸಹಿಸದೇ ಅನೇಕ ನಟಿಯರು ನಟನೆಯನ್ನೇ ಬಿಟ್ಟಿದ್ದಾರೆ. ಕೆಲವರು ಮದುವೆಯಾಗಿ, ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಅದಲ್ಲದೆ ನಾಗಾರ್ಜುನ ಒಡೆತನದ ಎನ್‌ ಕನ್ವೆನ್ಷನ್‌ ಸೆಂಟರ್‌ ನೆಲಸಮಗೊಳಿಸುವುದು ಬೇಡ ಎಂದಾದಲ್ಲಿ, ತನ್ನ ಬಳಿ ಸಮಂತಾ ಅವರನ್ನು ಕಳುಹಿಸುವಂತೆ ರಾಮ ರಾವ್‌, ಬೇಡಿಕೆ ಇಟ್ಟಿದ್ದರು. ರಾಮ ರಾವ್‌ ಬಳಿ ಹೋಗುವಂತೆ ಸಮಂತಾ ಅವರಿಗೆ ನಾಗಾರ್ಜುನ ಬಲವಂತ ಮಾಡಿದಾಗ, ಅದನ್ನು ಅಕೆ ಒಪ್ಪಿಕೊಂಡಿರಲಿಲ್ಲ. ಈ ವಿಚಾರವೇ ವಿಚ್ಛೇದನಕ್ಕೆ ಕಾರಣವಾಯಿತು ಎಂದು ಸಚಿವೆ ಸುರೇಖಾ ಹೇಳಿದ್ದಾರೆ. ಈ ಮಾನಹಾನಿ ಹೇಳಿಕೆಗೆ ಇಡೀ ಚಿತ್ರರಂಗವೇ ಆಕ್ರೋಶ ಹೊರಹಾಕುತ್ತಿದೆ.

ಹೈದರಾಬಾದ್‌ನ ನಾಂಪಲ್ಲಿ ಜಿಲ್ಲೆಯಲ್ಲಿ ಸಲ್ಲಿಸಲಾದ ದೂರಿನಲ್ಲಿ ನಾಗಾರ್ಜುನ ಅವರು ಕಾಂಗ್ರೆಸ್ ನಾಯಕರಿಗೆ ದೂರು ನೀಡಿದ್ದಾರೆ.

"ರಾಜಕೀಯ ಲಾಭ, ಪ್ರಚಾರ ಮತ್ತು  ಕುಟುಂಬದ ಪ್ರತಿಷ್ಠೆಗೆ ಹಾನಿಯನ್ನುಂಟುಮಾಡುವ ಉದ್ದೇಶದಿಂದ ಸಾರ್ವಜನಿಕರಿಗೆ ಸುಳ್ಳುಗಳನ್ನು ತಿಳಿಸುವ ದುರುದ್ದೇಶಪೂರಿತ  ಈ ಹೇಳಿಕೆಯನ್ನು ಮಾಡಲಾಗಿದೆ" ಎಂದು ದೂರಿನಲ್ಲಿ ತಿಳಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ