ನಟ ಮೋಹನ್ ಲಾಲ್ ಗೆ ಸಂಬಂಧಪಟ್ಟ ವಿಚಾರದಲ್ಲಿ ಪ್ರಕಾಶ್ ರೈ ನೀಡಿದ ಸ್ಪಷ್ಟನೆ ಇಲ್ಲಿದೆ ನೋಡಿ

ಬುಧವಾರ, 25 ಜುಲೈ 2018 (07:12 IST)
ಬೆಂಗಳೂರು : ಮಾಲಿವುಡ್ ನಟ ಮೋಹನ್ ಲಾಲ್ ಅವರಿಗೆ ಸಂಬಂಧಪಟ್ಟ  ವಿಚಾರವೊಂದರಲ್ಲಿ  ತಮ್ಮ ಹೆಸರು ಕೇಳಿ ಬಂದಿರುವುದಕ್ಕೆ ಇದೀಗ ಬಹುಭಾಷಾ ನಟ ಪ್ರಕಾಶ್ ರೈ ಅವರು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.


ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವ ಗಣ್ಯರ ಪಟ್ಟಿಯಲ್ಲಿ ಮೋಹನ್ ಲಾಲ್ ಹೆಸರನ್ನು ಸೇರಿಸಬಾರದೆಂದು ಮುಖ್ಯಮಂತ್ರಿಗೆ ಸಾಮೂಹಿಕ ಪತ್ರ ಬರೆದು ಒತ್ತಾಯಿಸಿದ್ದು ವ್ಯಾಪಕ ಸುದ್ದಿಯಾಗಿತ್ತು. ಈ ಪತ್ರಕ್ಕೆ 105 ಮಂದಿ ಸಹಿ ಹಾಕಿದ್ದರು. ಅದರಲ್ಲಿ ಪ್ರಕಾಶ್ ರೈ ಕೂಡಾ ಇದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು.


ಈ ಸುದ್ದಿ ತಿಳಿದ ನಟ ಪ್ರಕಾಶ್ ರೈ ಅವರು ಟ್ವೀಟರ್ ನಲ್ಲಿ ‘ನಾನು ಯಾವುದೇ ಮನವಿ ಪತ್ರಕ್ಕೆ ಸಹಿ ಹಾಕಿಲ್ಲ. ನನಗೆ ಏನೂ ಗೊತ್ತಿಲ್ಲ’ ಎಂದು ತಮ್ಮ ವಿರುದ್ಧ ಕೇಳಿ ಬಂದಿದ್ದ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ