ಡಿಸೆಂಬರ್ 2 ಕ್ಕೆ ಹೊಂಬಾಳೆ ಫಿಲಂಸ್ ಬಿಗ್ ಅನೌನ್ಸ್ ಮೆಂಟ್! ಪ್ರಭಾಸ್-ಪ್ರಶಾಂತ್ ನೀಲ್ ಸಿನಿಮಾ ಸುದ್ದಿ ಪಕ್ಕಾ?!

ಮಂಗಳವಾರ, 1 ಡಿಸೆಂಬರ್ 2020 (09:23 IST)
ಬೆಂಗಳೂರು: ಕೆಜಿಎಫ್ ಸಿನಿಮಾ ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲಂಸ್ ಡಿಸೆಂಬರ್ 2 ಕ್ಕೆ ಬಿಗ್ ಅನೌನ್ಸ್ ಮೆಂಟ್ ಮಾಡುವುದಾಗಿ ಘೋಷಿಸಿದೆ.


ಆ ಘೋಷಣೆ ಪ್ರಭಾಸ್ ಮತ್ತು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ ನ ಸಿನಿಮಾವಾಗಲಿದೆ ಎನ್ನಲಾಗುತ್ತಿದೆ. ಪ್ರಭಾಸ್-ಪ್ರಶಾಂತ್ ನೀಲ್ ಸಿನಿಮಾ ಮಾಡುವುದಾಗಿ ಕೆಲವು ತಿಂಗಳುಗಳ ಹಿಂದೆಯೇ ಮಾತುಕತೆಯಾಗಿತ್ತು. ಅದೀಗ ಅಧಿಕೃತ ಘೋಷಣೆಯಾಗಿರಬಹುದು ಎಂಬ ನಿರೀಕ್ಷೆಯಿದೆ. ಡಿಸೆಂಬರ್ 2 ರಂದು ಅಂದರೆ ನಾಳೆ ಮಧ‍್ಯಾಹ್ನ 2.09 ಕ್ಕೆ ಆ ಹೊಸ ವಿಚಾರ ಹೊರಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ