ನಂದಮೂರಿ ಕಲ್ಯಾಣ್ ಚಿತ್ರದಲ್ಲಿ ಐಟಂ ಸಾಂಗ್ ಮಾಡಲಿದ್ದಾರಂತೆ ಅಫ್ಘಾನಿಸ್ತಾನದ ಹಾಟ್ ಬ್ಯೂಟಿ ಹುಸೇನ್
ಶುಕ್ರವಾರ, 5 ಫೆಬ್ರವರಿ 2021 (09:41 IST)
ಹೈದರಾಬಾದ್ : ನಂದಮೂರಿ ಕಲ್ಯಾಣ್ ಅವರ ಚಿತ್ರವೊಂದರ ಚಿತ್ರೀಕರಣ ಸದ್ದಿಲ್ಲದೇ ನಡೆಯುತ್ತಿದೆ. ಇದೀಗ ಚಿತ್ರದ ಬಗ್ಗೆ ಮಾಹಿತಿಯೊಂದು ಹೊರಬಂದಿದ್ದು, ಈ ಚಿತ್ರದ ಐಟಂ ಸಾಂಗ್ ಗಾಗಿ ಅಫ್ಘಾನಿಸ್ತಾನದ ಹಾಟ್ ಬ್ಯೂಟಿ ಹುಸೇನ್ ಅವರನ್ನು ಕರೆತರಲಾಗುತ್ತಿದೆಯಂತೆ.
ಬಾಲಿವುಡ್ ನಲ್ಲಿ ನಾಯಕಿಯಾಗಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಹುಸೇನ್ ಈ ಚಿತ್ರದ ಮೂಲಕ ದಕ್ಷಿಣ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರದ ಶೀರ್ಷಿಕೆ ಇನ್ನೂ ನಿಗದಿಯಾಗಿಲ್ಲ. ಕಲ್ಯಾಣ ಭಾರೀ ಬಜೆಟ್ ನೊಂದಿಗೆ ನಿರ್ಮಿಸುತ್ತಿರುವ ಈ ಚಿತ್ರ ಮಲ್ಲಿ ಡಿ ವೇಣು ನಿರ್ದೇಶನ ಮಾಡಲಿದ್ದಾರೆ. ಹುಸೇನ್ ಈ ಚಿತ್ರದಲ್ಲಿ ಐಟಂ ಸಾಂಗ್ ನಲ್ಲಿ ನಟಿಸುತ್ತಿರುವುದರಿಂದ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗುತ್ತಿದೆ ಎನ್ನಲಾಗಿದೆ.