ಯಶ್ ಸಿನಿಮಾಗೆ ‘ಗೂಗ್ಲಿ’ ಎಂದು ಹೆಸರಿಡಲು ನಿರ್ದೇಶಕ ಪವನ್ ಎಷ್ಟೆಲ್ಲಾ ಕಷ್ಟಪಟ್ಟಿದ್ದರು ಗೊತ್ತಾ?!

ಶುಕ್ರವಾರ, 14 ಆಗಸ್ಟ್ 2020 (13:22 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಿಟ್ ಸಿನಿಮಾಗಳ ಪೈಕಿ ‘ಗೂಗ್ಲಿ’ ಕೂಡಾ ಒಂದು. ಆದರೆ ಈ ಸಿನಿಮಾಗೆ ಇಂತಹದ್ದೊಂದು ಸ್ಪೆಷಲ್ ಟೈಟಲ್ ಇಡಲು ನಿರ್ಮಾಪಕರನ್ನು ಒಪ್ಪಿಸಲು ನಿರ್ದೇಶಕ ಪವನ್ ಒಡೆಯರ್ ಸಾಕಷ್ಟು ಸರ್ಕಸ್ ಮಾಡಬೇಕಾಯಿತಂತೆ.


ಪವನ್ ಸಿನಿಮಾಗೆ ಗೂಗ್ಲಿ ಎಂದು ಹೆಸರಿಡೋಣ ಎಂದಾಗ ನಿರ್ಮಾಪಕ ಜಯಣ್ಣ ಬೇಡ ಎಂದಿದ್ದರಂತೆ. ಆದರೆ ಹೇಗಾದ್ರೂ ಸರಿಯೇ ಇದೇ ಟೈಟಲ್ ಇಡಬೇಕು ಎಂದು ಹಠಕ್ಕೆ ಬಿದ್ದ ಪವನ್ ಜನರ ಬಳಿ ಹೋಗಿದ್ದಾರೆ. ಸಾರ್ವಜನಿಕರ ಬಳಿ ಈ ಟೈಟಲ್ ಹೇಗಿರುತ್ತದೆ ಎಂದು ಅಭಿಪ್ರಾಯ ಕೇಳಿ ಅದನ್ನೇ ಬಳಸಿಕೊಂಡು ಒಂದು ಟ್ರೈಲರ್ ನ್ನೇ ತಯಾರಿಸಿ ನಿರ್ಮಾಪಕರ ಮುಂದೆ ಇಟ್ಟರಂತೆ.

ಆ ಟ್ರೈಲರ್ ನಲ್ಲಿ ಜನ ಗೂಗ್ಲಿ ಟೈಟಲ್ ಬಗ್ಗೆ ಆಸಕ್ತಿ ವಹಿಸಿದ್ದನ್ನು ನೋಡಿ ಕೊನೆಗೂ ಜಯಣ್ಣ ಒಪ್ಪಿಕೊಂಡರಂತೆ. ಇಂದು ಯಶ್ ಸಿನಿಮಾಗಳ ಪೈಕಿ ಹಿಟ್ ಲಿಸ್ಟ್ ನಲ್ಲಿ ಕಾಣಿಸಿಕೊಳ್ಳುವ ಸಿನಿಮಾಗಳಲ್ಲಿ ಗೂಗ್ಲಿ ಕೂಡಾ ಒಂದು ಎಂಬುದು ವಿಶೇಷ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ