ಹುಚ್ಚ ವೆಂಕಟ್ ಗೆ ಸೀರಿಯಲ್ ಸುಂದರಿ ಗೌತಮಿ ಜೋಡಿ

ಸೋಮವಾರ, 1 ಫೆಬ್ರವರಿ 2016 (13:17 IST)
ಬಿಗ್ ಬಾಸ್ ಮನೆಗೆ ಹೋಗಿ ಅಲ್ಲಿಂದ ಹೊರ ಬಂದಿದ್ದೇ ತಡ  ಹುಚ್ಚ ವೆಂಕಟ್ ಅವರ ಅದೃಷ್ಟಾನೇ ಬದಲಾಗಿ ಹೋಯ್ತು. ಅವರಿಗೆ ಆಫರ್ ಗಳ ಮೇಲೆ ಆಫರ್ ಗಳು ಬರೋದಕ್ಕೆ ಶುರುವಾಗಿದೆ. ಇನ್ನು ವೆಂಕಟ್ ಹಾಡಿರುವ ಪರಪಂಚದ ಸಾಂಗ್ ಅಂತೂ ಅಭಿಮಾನಿಗಳ ಬಾಯಲ್ಲಿ ಈಗಲೂ ಹರಿದಾಡುತ್ತಿದೆ.
 
ಹೀಗಿರುವಾಗಲೇ ಹುಚ್ಚ ವೆಂಕಟ್ ಅವರ ಅಭಿಮಾನಿಗಳಿಗೆ ಖುಷಿ ತರುವ ಮತ್ತೊಂದು ಸುದ್ದಿ ಕೂಡ ಈಗ ಹೊರ ಬಿದ್ದಿದೆ. ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಬಿ.ವಿಜಯ್ ಕುಮಾರ್ ನಿರ್ಮಾಣದ ಎಸ್.ನಾರಾಯಣ್ ನಿರ್ದೇಶನ  ಮಾಡುತ್ತಿರುವ "ಡಿಕ್ಟೇಟರ್" ಸಿನಿಮಾದಲ್ಲಿ ವೆಂಕಟ್ ಜೊತೆ ಅಭಿನಯಿಸೋಕೆ ಬಿಗ್ ಬಾಸ್ ಸುಂದರಿ ಗೌತಮಿ ಒಪ್ಪಿಕೊಂಡಿದ್ದಾರಂತೆ. ಗೌತಮಿ ಈ ಹಿಂದೆ "ಮುತ್ತಿನ ಪಲ್ಲಕ್ಕಿ" ಚಿತ್ರದಲ್ಲೂ ನಟಿಸಿದ್ದರು. ಈ ಸಿನಿಮಾದ  ಮಹೂರ್ತ ಫೆಬ್ರವರಿ 24 ರಂದು ನಡೆಯಲಿದೆ.
 
ಮತ್ತೊಂದು ಕಡೆ ಹುಚ್ಚ ವೆಂಕಟ್ ಬಿಗ್ ಬಾಸ್ ಮನೆಗೆ ಬರ್ತಾರೆ ಅನ್ನೋ ಸುದ್ದಿಗಳು ಬಹು ದಿನಗಳಿಂದ ಕೇಳಿ ಬರುತ್ತಲೇ ಇತ್ತು.ಆ ಮಾತು ನಿನ್ನೆ ನಡೆದ ಫಿನಾಲೆಯಲ್ಲಿ ನಿಜವಾಗಿತ್ತು. ವೆಂಕಟ್ ಫೈನಲ್ ನಲ್ಲಿ ಭಾಗವಹಿಸಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು ವೆಂಕಟ್ ಅಭಿಮಾನಿಗಳಿಗೆ ಖುಷಿ ನೀಡಿತು.
 

ವೆಬ್ದುನಿಯಾವನ್ನು ಓದಿ