ಮುತ್ತಿನ ನಗರಿಯಲ್ಲಿ ಇಂಡಿವುಡ್‌ನ ಮೂರನೇ ಆವೃತ್ತಿಯ ಚಿತ್ರೋತ್ಸವ
ಮಂಗಳವಾರ, 28 ನವೆಂಬರ್ 2017 (15:39 IST)
ಇಂಡಿವಿಡ್ ಫಿಲ್ಮ್ ಕಾರ್ನೀವಲ್‌ನ ಮೂರನೇ ಆವೃತ್ತಿಯ ಚಿತ್ರೋತ್ಸವ ಡಿಸೆಂಬರ್ 1 ರಿಂದ 4 ರವರೆಗೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯಲಿದೆ .
ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಕಾರ್ನಿವಾಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವೆ ಅಲ್ಫೋನ್ಸ್ ಕಣ್ಣನ್ ಥಾನಮ್, ತೆಲಂಗಾಣಾ ಸಿಎಂ ಕೆ.ಚಂದ್ರಶೇಖರ್ ರಾವ್, ತೆಲಂಗಾಣದ ಸಿನೆಮಾಟೋಗ್ರಾಫಿ ಖಾತೆ ಸಚಿವ ಶ್ರಿನಿವಾಸ್ ಯಾದವ್ ಡಿಸೆಂಬರ್ 1 ರಂದು ಸಂಜೆ 6 ಗಂಟೆಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಕಾರ್ನೀವಲ್‌ನಲ್ಲಿ 5000 ವ್ಯಾಪಾರಿ ಪ್ರತಿನಿಧಿಗಳು, 500 ಹೂಡಿಕೆದಾರರು, 300 ಪ್ರದರ್ಶಕರು ಮತ್ತು 2500 ಪ್ರತಿವಿಧಿಗಳನ್ನು ಸೆಳೆಯುವ ನಿರೀಕ್ಷೆಯಿದೆ. ಭಾರತೀಯ ಬಿಲಿಯನೇರ್‌ಗಳು ಮತ್ತು ಕಾರ್ಪೋರೇಟ್‌ಗಳು ಸ್ಥಾಪಿಸಲಾದ ಇಂಡಿವುಡ್ ಸಂಸ್ಥೆಯ ಮುಖ್ಯಸ್ಥರಾಗಿರುವ ಯುಎಇಯಲ್ಲಿ ನೆಲೆಸಿರುವ ಸೋಹನ್ ರಾಯ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಯುಎಇ ಮೂಲದ ಏರೀಸ್ ಗ್ರೂಪ್ ಚೇರ್ಮನ್ ಮತ್ತು ಸಿಇಒ ಆಗಿರುವ ಸೋಹನ್ ರಾಯ್, 10,000 ಹೊಸ 4K ಪ್ರೊಜೆಕ್ಷನ್ ಮಲ್ಟಿಪ್ಲೆಕ್ಸ್ ಪರದೆಗಳು, 100,000 2K / 4K ಪ್ರೊಜೆಕ್ಷನ್ ಹೋಮ್ ಸಿನಿಮಾಗಳು, 8K / 4K ಫಿಲ್ಮ್ ಸ್ಟುಡಿಯೊಗಳು, 100 ಅನಿಮೇಷನ್ / ವಿಎಫ್ಎಕ್ಸ್ ಸ್ಟುಡಿಯೊಗಳು ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಅನುಗುಣವಾಗಿ ಫಿಲ್ಮ್ ಶಾಲೆಗಳನ್ನು ಪ್ರಾರಂಭಿಸುವ ಉದ್ದೇಶ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಲಿಯನೇರ್ ಕ್ಲಬ್ ಉದ್ಘಾಟನೆ ಚಲನಚಿತ್ರ ಕಾರ್ನೀವಲ್‌ನ ಪ್ರಮುಖ ಅಂಶವಾಗಿದೆ. ಹೆಚ್ಚು
ಭಾರತೀಯ ಮೂಲದ 50 ಬಿಲಿಯನೇರ್‌ಗಳು ಮತ್ತು ಪ್ರಪಂಚದಾದ್ಯಂತವಿರುವ 500 ಹೂಡಿಕೆದಾರರು ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾರ್ನೀವಲ್‌ನ ಇತರ ಕಾರ್ಯಕ್ರಮಗಳೆಂದರೆ - ಆಲ್ ಲೈಟ್ಸ್ ಇಂಡಿಯಾ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ (ಎಐಐಐಐಎಫ್ಫ್), ಇಂಡಿವುಡ್ ಫಿಲ್ಮ್ ಮಾರ್ಕೆಟ್ (ಐಎಫ್ಎಮ್), ಇಂಡಿವುಡ್ ಟ್ಯಾಲೆಂಟ್ ಹಂಟ್ (ಇತ್) ಮತ್ತು ಇಂಡಿವಿಡ್ ಎಕ್ಸಲೆನ್ಸ್ ಪ್ರಶಸ್ತಿಗಳಾಗಿವೆ ಎಂದು ಆಯೋಜಕರು ತಿಳಿಸಿದ್ದಾರೆ.
ಆಲ್ ಲೈಟ್ಸ್ ಇಂಡಿಯಾ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ (ಎಎಲ್ಐಐಎಫ್ಎಫ್) 50 ದೇಶಗಳ 115 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ. ಎಐಐಐಎಫ್ಎಫ್ ಮೂರನೇ ಆವೃತ್ತಿಯಲ್ಲಿ ಸುಮಾರು 80 ದೇಶಗಳಿಂದ 1000 ಚಲನಚಿತ್ರ ಸಲ್ಲಿಕೆಗಳಾಗಿವೆ. ಇದರ ಪೈಕಿ 115 ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ಪದ್ಮ ಭೂಷಣ ಸ್ವೀಕೃತ ಶ್ಯಾಮ್ ಬೆನೆಗಲ್ ಈ ಕಾರ್ಯಕ್ರಮದಲ್ಲಿ ಉತ್ಸವ ಅಧ್ಯಕ್ಷರಾಗಲಿದ್ದಾರೆ. ಚಿತ್ರನಿರ್ಮಾಪಕರ ಗೌರವವಾಗಿ ಶ್ಯಾಮ್ ಬೆನೆಗಲ್ ಹಿಂದಿನ ಸಿನೆಮಾ ಅವಲೋಕನವನ್ನು ಪ್ರದರ್ಶಿಸಲಾಗುತ್ತಿದೆ. 11 ಪಾಲಂಕಾ ಅವಾರ್ಡ್ ವಿಜೇತ ಫಿಲಿಪಿನೋ ನಿರ್ದೇಶಕ ಜುನ್ ರೋಬಿಲ್ಸ್ ಲಾನಾ ಅವರ ಟ್ರೈಲಾಜಿ ಮತ್ತೊಂದು ವಿಶಿಷ್ಟ ಲಕ್ಷಣವಾಗಿದೆ. ಎಎಲ್ಐಐಎಫ್ಎಫ್ ಈ ವರ್ಷದ ಅನಿಮೇಷನ್ ಮತ್ತು ಪರಿಸರ ಸಿನೆಮಾಗಳಿಗೆ ಮೀಸಲಾದ ವಿಶೇಷ ವಿಭಾಗವನ್ನು ಸಹ ಹೊಂದಿರುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಇಂಡಿವಿಡ್ ಫಿಲ್ಮ್ ಮಾರ್ಕೆಟ್' ಚಲನಚಿತ್ರ ನಿರ್ದೇಶಕರು, ನಿರ್ಮಾಪಕರು, ಹೂಡಿಕೆದಾರರು, ತಂತ್ರಜ್ಞಾನ ಅಭಿವರ್ಧಕರು ಮತ್ತು ಉದ್ಯಮದ ಪಾಲುದಾರರಿಗೆ ವೇದಿಕೆಯನ್ನು ಒದಗಿಸುತ್ತದೆ, ವೇದಿಕೆಯು ಭಾರತೀಯ ಚಲನಚಿತ್ರಗಳನ್ನು ಜಾಗತಿಕವಾಗಿ ಪ್ರದರ್ಶಿಸಲು ನೆರವು ನೀಡುತ್ತದೆ. ದೇಶಾದ್ಯಂತ ಕಾಲೇಜುಗಳಿಂದ ವಿದ್ಯಾರ್ಥಿಗಳು ಪ್ರತಿಭೆಯನ್ನು ಪ್ರದರ್ಶಿಸಬಹುದು ಎಂದು ಮೂಲಗಳು ತಿಳಿಸಿವೆ.
ದೇಶ ಮತ್ತು ವಿದೇಶದಿಂದ ಪ್ರಮುಖ ತಂತ್ರಜ್ಞರು ಸೇರಿದಂತೆ ಪ್ರಸಿದ್ಧ ಚಲನಚಿತ್ರ ತಾರೆಯರು ಕಾರ್ನೀವಲ್ ಚಿತ್ರೋತ್ವದಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದ್ದಾರೆ ಎಂದು ಕಾರ್ನಿವಾಲ್ ಆಯೋಜಕರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.