ನನಗೆ ಒಂದಕ್ಕಿಂತ ಹೆಚ್ಚು ವಿವಾಹವಾಗುತ್ತೆ ಅಂದ ಕಂಗನಾ

ಮಂಗಳವಾರ, 26 ಜುಲೈ 2016 (13:50 IST)
ಬಾಲಿವುಡ್ ನಲ್ಲಿ ತನ್ನ ಅಭಿನಯದ ಜೊತೆಗೆ ವ್ಯಕ್ತಿತ್ವದಿಂದಲೂ ಭಿನ್ನವಾಗಿ ಗುರುತಿಸಿಕೊಳ್ಳುವವರಲ್ಲಿ ಕಂಗನಾ ರನೌತ್ ಕೂಡ ಒಬ್ಬರು . ಕಂಗನಾ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಗಿನಿಂದಲೂ ನಾನಾ ಕಾರಣಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಸಿನಿಮಾದಂತೆ ತಮ್ಮ ವೈಯುಕ್ತಿಕ ಜೀವನದಲ್ಲೂ ಅವರು ಸುದ್ದಿಯ ಕೇಂದ್ರಬಿಂದು.
ಇದೀಗ ಕಂಗನಾ ಎಲ್ಲರೂ ಅಚ್ಚರಿ ಪಡುವಂತಹ ಒಂದು ಹೇಳಿಕೆಯನ್ನು ನೀಡಿ ಸುದ್ದಿಗೆ ಆಹಾರವಾಗಿದ್ದಾರೆ. ಇತ್ತೀಚೆಗೆ ಫ್ಯಾಷನ್ ಶೋ ಒಂದರಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಕಂಗನಾ ತನ್ನ ವಿವಾಹದ ಬಗ್ಗೆ ಮಾತನಾಡಿದ್ದಾರೆ. ಆಗ ಅವರು ತನ್ನ ಗೆಳೆಯ ಫ್ಯಾಷನ್ ಡಿಸೈನರ್ ಮಾನವ ಅವರು ಡಿಸೈನ್ ಮಾಡಿದ ಉಡುಗೆಗಳ ಬಗ್ಗೆ ಮಾತನಾಡುತ್ತಾ ನನ್ನ ಮೊದಲ ವಿವಾಹಕ್ಕೆ ನಾನು ಮಾನವ ಡಿಸೈನ್ ಮಾಡಿದ ಉಡುಗೆಗಳನ್ನೇ ಧರಿಸುತ್ತೇನೆ ಅಂತಾ ಹೇಳಿದ್ದಾರೆ. ಕೂಡಲೇ ಮಾಧ್ಯಮದವರು ಹಾಗಾದ್ರೆ ನೀವು ಎಷ್ಟು ವಿವಾಹವಾಗುತ್ತೀರಿ ಅಂತಾ ಕೇಳಿದ್ದಾರೆ.ಅದಕ್ಕೆ ಕಂಗನಾ ಎಷ್ಟು ಬೇಕಾದರು ಅಂದಿದ್ದಾರೆ.
 
ಒಂದು ವಿವಾಹ ಮುರಿದು ಬಿದ್ದರೆ ನಾನು ಇನ್ನೊಂದು ಆಗಲೇ ಬೇಕಲ್ವಾ. ಹಾಗೇ ಅದು ಮುರಿದು ಬಿದ್ದರೆ ಮತ್ತೊಂದು.ಅದರಲ್ಲೇನು ತಪ್ಪು. ಒಂದು ಆದ ಮೇಲೆ ಇನ್ನು ಹೆಚ್ಚು ಆಗೋದರಲ್ಲಿ ತಪ್ಪೇನು ಅಂತಾ ಎಲ್ಲರೂ ಅಚ್ಚರಿಪಡುವಂತಹ ಹೇಳಿಕೆ ನೀಡಿದ್ದಾರೆ. ಕಂಗನಾ ಸದ್ಯ ನೀಡಿರುವ ಹೇಳಿಕೆ ಕಂಗನಾ ಅಭಿಮಾನಿಗಳು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ