ಕೋಟಿ ಕೊಟ್ಟರು ಬಿಗ್ ಬಾಸ್ ಗೆ ಹೋಗಲ್ಲ ಎಂದ ಸ್ಯಾಂಡಲ್ ವುಡ್ ನ ಈ ನಟಿ ಯಾರು ಗೊತ್ತಾ?

ಗುರುವಾರ, 4 ಅಕ್ಟೋಬರ್ 2018 (08:33 IST)
ಬೆಂಗಳೂರು : ಬಿಗ್ ಬಾಸ್ ಮನೆಗೆ ಹೋಗಲು ಅವಕಾಶ ಸಿಕ್ಕರೆ ಸಾಕು ಎಂದು  ಎಲ್ಲರೂ ತುದಿಗಾಲಿನಲ್ಲಿ ನಿಂತಿದ್ದರೆ ಸ್ಯಾಂಡಲ್ ವುಡ್ ನಟಿ ವಿಜಯಲಕ್ಷ್ಮಿ ಅವರು ಮಾತ್ರ ಕೋಟಿ ಕೊಟ್ಟರು ಬಿಗ್ ಬಾಸ್ ಗೆ ಹೋಗಲ್ಲ ಎಂದು ಹೇಳುವುದರ ಮೂಲಕ ಆಶ್ಚರ್ಯವನ್ನುಂಟುಮಾಡಿದ್ದಾರೆ.


ನಟಿ ವಿಜಯಲಕ್ಷ್ಮಿ ಅವರು ಹೆಸರು ಇದೇ ಮೊದಲ ಬಾರಿಯಲ್ಲ , ಈ ಹಿಂದಿನ ಸೀಸನ್ ಗಳಲ್ಲೂ ವಿಜಯಲಕ್ಷ್ಮಿ ಬಿಗ್ ಬಾಸ್ ಗೆ ಹೋಗ್ತಾರೆ ಅನ್ನೋ ಸುದ್ದಿ ಹರಿದಾಡಿತು . ಅದೇರೀತಿ ಈ ಬಾರಿಯೂ ಕೂಡ ನಟಿ ವಿಜಯಲಕ್ಷ್ಮಿ ಬಿಗ್ ಬಾಸ್ ಗೆ ಹೋಗ್ತಾರೆ ಎನ್ನಲಾಗುತ್ತಿದೆ . ಆದರೆ ಈ ಬಗ್ಗೆ ಖುದ್ದಾಗಿ ವಿಜಯಲಕ್ಷ್ಮಿ ಅವರನ್ನೇ ಕೇಳಿದಾಗ ಅವರು ಹೇಳಿದ್ದು ಕೇಳಿದ್ರೆ ಶಾಕ್ ಆಗುತ್ತೆ.


ನನಗೆ ರಿಯಾಲಿಟಿ ಶೋ ಇಷ್ಟವಿಲ್ಲ.. ಬಿಗ್ ಬಾಸ್ ಆಟ, ಟಾಸ್ಕ್ ಹಾಗೂ ನಾಮಿನೇಷನ್ ಎಲ್ಲವೂ ನನಗೆ ಅಷ್ಟಾಗಿ ಇಷ್ಟವಾಗಲಿಲ್ಲ. ಚಿತ್ರರಂಗದಿಂದ ಈಗಾಗಲೇ ಸಾಕಷ್ಟು ಅವಕಾಶಗಳು ಬರುತ್ತಿವೆ. ಆದರೆ ಬಿಗ್ ಬಾಸ್ ಹೋಗ್ತಾರೆ ಎನ್ನುವ ಸುದ್ದಿಯಿಂದ ನಿರ್ಮಾಪಕರು ನನಗೆ ಅವಕಾಶ ನೀಡಲು ಹಿಂದೆಟ್ಟು ಹಾಕುತ್ತಿದ್ದಾರೆ. ನಾನು ಸಿನಿಮಾ ಅವಕಾಶಗಳಿಂದ ನೆಮ್ಮದಿಯಿಂದ ಇದ್ದೀನಿ, ಕೋಟಿ ಕೊಟ್ರು ಬಿಗ್ ಬಾಸ್ ಗೆ ಹೋಗುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ ನಟಿ ವಿಜಯಲಕ್ಷ್ಮಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ