ಟಾಕ್ಸಿಕ್ ಗೆ ಬರ್ತಾರಾ ಸಲ್ಮಾನ್ ಖಾನ್: ರಾಕಿಂಗ್ ಸ್ಟಾರ್ ಯಶ್ ಭೇಟಿ ಮಾಡಿರುವುದರ ರಹಸ್ಯವೇನು

Krishnaveni K

ಮಂಗಳವಾರ, 30 ಜುಲೈ 2024 (11:54 IST)
Photo Credit: X
ಬೆಂಗಳೂರು: ಟಾಕ್ಸಿಕ್ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ಮುಂಬೈನಲ್ಲಿ ಸಲ್ಮಾನ್ ಖಾನ್ ಬಾಡಿ ಗಾರ್ಡ್ ಜೊತೆಗಿರುವ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಲ್ಮಾನ್ ಖಾನ್ ಬಾಡಿ ಗಾರ್ಡ್ ಶೇರಾ ಜೊತೆ ಯಶ್ ಪೋಸ್ ಕೊಟ್ಟಿದ್ದಾರೆ. ಇದರ ನಡುವೆಯೇ ಮುಂಬೈನಲ್ಲಿ ಯಶ್ ಓಡಾಡುತ್ತಿರುವ ವಿಡಿಯೋಗಳೂ ವೈರಲ್ ಆಗಿವೆ. ಆ ಫೋಟೋ ನೋಡಿದರೆ ಇದು ತೀರಾ ಇತ್ತೀಚೆಗಿನದ್ದು ಎನ್ನುವುದು ಸ್ಪಷ್ಟವಾಗುತ್ತದೆ.

ಹೀಗಾಗಿ ಟಾಕ್ಸಿಕ್ ಸಿನಿಮಾಗಾಗಿ ಸಲ್ಮಾನ್ ಖಾನ್ ರನ್ನು ಯಶ್ ಭೇಟಿ ಮಾಡಿರಬಹುದೇ ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ. ಟಾಕ್ಸಿಕ್ ಸಿನಿಮಾವನ್ನು ಪ್ಯಾನ್ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ತರಲು ಯಶ್ ಆಂಡ್ ಟೀಂ ಶ್ರಮಿಸುತ್ತಿದೆ. ಗೀತು ಮೋಹನ್ ದಾಸ್ ಇದರ ನಾಯಕಿ.

ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಕಲಾವಿದರೂ ಕರೆತರಲಾಗುತ್ತಿದೆ ಎಂಬ ಸುದ್ದಿಗಳಿವೆ. ಇದರ ನಡುವೆ ಸಲ್ಮಾನ್ ಖಾನ್ ಬಾಡಿ ಗಾರ್ಡ್ ಜೊತೆ ಯಶ್ ಇರುವ ಫೋಟೋ ನೋಡಿ ನೆಟ್ಟಿಗರು ಟಾಕ್ಸಿಕ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ರನ್ನು ಹಾಕಿಕೊಳ್ಳಲು ಯಶ್ ಭೇಟಿಯಾಗಿರಬಹುದೇ ಎಂಬ ಅನುಮಾನ ಮೂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ