ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಟನಿಗೆ ದರ್ಶನ್ ಮಾಡಿದ ಸಹಾಯ ಎಂಥದ್ದು ಗೊತ್ತೇ?!

ಗುರುವಾರ, 20 ಫೆಬ್ರವರಿ 2020 (09:21 IST)
ಬೆಂಗಳೂರು: ಚಿತ್ರರಂಗದಲ್ಲಿ, ಅಭಿಮಾನಿಗಳಿಗೆ ಏನೇ ಕಷ್ಟ ಬರಲಿ ಬಲ ಕೈಯಲ್ಲಿ ಕೊಟ್ಟದ್ದು ಎಡ ಕೈಯಲ್ಲಿ ಗೊತ್ತಾಗಬಾರದು ಎನ್ನುವ ರೀತಿಯಲ್ಲಿ ಸಹಾಯ ಮಾಡುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ರ ಜನ ಮೆಚ್ಚುವ ಕೆಲಸವನ್ನು ಜಗ್ಗೇಶ್ ಬಯಲು ಮಾಡಿದ್ದಾರೆ.


ಜಗ್ಗೇಶ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಕಿಲ್ಲರ್ ವೆಂಕಟೇಶ್ ಈಗ ಅನಾರೋಗ್ಯದಿಂದ ಬಳಲುತ್ತಿದ್ದು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗೆ ಹಣವಿಲ್ಲದೇ ಒದ್ದಾಡುತ್ತಿರುವ ಸ್ನೇಹಿತನ ಅಸಹಾಯಕತೆಯನ್ನು ಜಗ್ಗೇಶ್ ದರ್ಶನ್ ಗೆ ಕರೆ ಮಾಡಿ ತಿಳಿಸಿದ್ದರಂತೆ.

ಇದಕ್ಕೆ ತಕ್ಷಣ ಸ್ಪಂದಿಸಿರುವ ದರ್ಶನ್ ಕೂಡಲೇ 1 ಲಕ್ಷ ರೂ. ಕಳುಹಿಸಿ ನೆರವು ನೀಡಿದ್ದಾರೆ. ಚಿತ್ರೋದ್ಯಮದಲ್ಲಿ ಸ್ಪಂದಿಸಿದ ಮೊದಲ ಕಲಾಬಂಧು ದರ್ಶನ್. ಅವರ ನೇರ ಗುಣ ನನ್ನ ಹೃದಯದಲ್ಲಿ ಅಚ್ಚಾಯಿತು. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ