ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಜಯಮಾಲಾ ಪುತ್ರಿ, ನಟಿ ಸೌಂದರ್ಯ

Sampriya

ಸೋಮವಾರ, 20 ಜನವರಿ 2025 (15:40 IST)
Photo Courtesy X
ಬೆಂಗಳೂರು:  ಹಿರಿಯ ನಟಿ ಹಾಗೂ ರಾಜಕಾರಣಿಯಾಗಿರುವ ಜಯಮಾಲಾ ಅವರು ಪುತ್ರಿ, ನಟಿ ಸೌಂದರ್ಯ ಅವರು ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ಫೆ 7ರಂದು ಸೌಂದರ್ಯ ಅವರ ಮದುವೆ ರುಷಭ್ ಕೆ ಜತೆ ಪ್ಯಾಲೇಸ್ ಗ್ರೌಂಡ್‌ನ ಗಾಯತ್ರಿಯಲ್ಲಿ ನಡೆಯಲಿದೆ.

ಜಯಮಾಲಾ ಅವರು ಇದೀಗ ಮಗಳ ಮದುವೆಗೆ ಸಿನಿಮಾ ರಂಗದವರನ್ನು ಹಾಗೂ ರಾಜಕೀಯ ಗಣ್ಯರನ್ನು ಆಹ್ವಾನಿಸುತ್ತಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸೌಂದರ್ಯ ಅವರ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ. ಜಯಮಾಲಾ ಅವರು ಈಚೆಗೆ ಮಾಜಿ ಸಂಸದ ಡಿಕೆ ಸುರೇಶ್‌ ಅವರನ್ನು ಮಗಳ ಮದುವೆಗೆ ಆಮಂತ್ರಣ ನೀಡಿ ಆಹ್ವಾನಿಸಿದ್ದರು.

ಸೌಂದರ್ಯ ಅವರ ಸಿನಿ ಜರ್ನಿ:

ರಿಯಲ್ ಸ್ಟಾರ್ ಉಪೇಂದ್ರ ಅವರು ನಾಯಕನಾಗಿ ಅಭಿನಯಿಸಿದ ಗಾಡ್ ಫಾದರ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಸೌಂದರ್ಯ ಪಾದಾರ್ಪಣೆ ಮಾಡಿದರು. ಆನಂತರ ಶ್ರೀನಗರ ಕಿಟ್ಟಿ ನಾಯಕನಾಗಿ ಅಭಿನಯಿಸಿದ ಪಾರು ವೈಪ್ ಆಫ್ ದೇವದಾಸ್ ಸಿನಿಮಾದಲ್ಲಿ ಅಭಿನಯಿಸಿದರು.

ನಂತರ ಅವರು ಯಶೋ ಸಾಗರ್ ಅವರೊಂದಿಗೆ 'ಮಿಸ್ಟರ್ ಪ್ರೇಮಿಕುಡು' ಚಿತ್ರದ ಮೂಲಕ ಟಾಲಿವುಡ್‌ಗೂ ಪ್ರವೇಶಿಸಿದರು.  ನಂತರ ದುನಿಯಾ ವಿಜಯ್ ಅವರಿಗೆ ಜೋಡಿಯಾಗಿ ಸಿಂಹಾದ್ರಿ ಸಿನಿಮಾದಲ್ಲೂ ಅಭಿನಯಿಸಿದರು.  ಆದರೆ ಸದ್ಯ ಬಣ್ಣದ ಬದುಕಿನಿಂದ ಸೌಂದರ್ಯ ದೂರ ಉಳಿದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ