ವಾರ ಕಳೆದು ಬಿಡುಗಡೆಯಾದರೂ ಜೆರ್ಸಿಗೆ ಪೆಟ್ಟುಕೊಟ್ಟ ಕೆಜಿಎಫ್ 2

ಸೋಮವಾರ, 25 ಏಪ್ರಿಲ್ 2022 (09:00 IST)
ಮುಂಬೈ: ಕೆಜಿಎಫ್ 2 ಬಿಡುಗಡೆಯಾಗಿ ಒಂದು ವಾರದ ಬಳಿಕ ಬಿಡುಗಡೆಯಾದರೂ ಶಾಹಿದ್ ಕಪೂರ್ ನಾಯಕರಾಗಿರುವ ಹಿಂದಿ ಸಿನಿಮಾ ಜೆರ್ಸಿಗೆ ಗಲ್ಲಾಪೆಟ್ಟಿಗೆಯಲ್ಲಿ ಹೊಡೆತ ಬಿದ್ದಿದೆ.

ಶುಕ್ರವಾರ ಬಿಡುಗಡೆಯಾದ ಜೆರ್ಸಿ ಎರಡನೇ ದಿನಕ್ಕೆ ಗಳಿಸಿದ್ದು ಸರಾಸರಿ 5 ಕೋಟಿ ರೂ. ಈ ಸಿನಿಮಾಗೆ ಹೋಲಿಸಿದರೆ ಕೆಜಿಎಫ್ 2 ದುಪ್ಪಟ್ಟು ಆದಾಯ ಪಡೆದುಕೊಂಡಿದೆ. ಕೆಜಿಎಫ್ 2 ಈಗಾಗಲೇ ಹಿಂದಿಯಲ್ಲಿ 300 ಕೋಟಿ ರೂ. ಗಳಿಕೆ ದಾಟಿದೆ.

ಲಾಕ್ ಡೌನ್ ಬಳಿಕ ಬಾಲಿವುಡ್ ಸಿನಿಮಾಗಳು ಜನರಿಗೆ ಇಷ್ಟವಾಗುತ್ತಲೇ ಇಲ್ಲ. ಬಾಲಿವುಡ್ ಸಿನಿಮಾಗಳು ಸೂಪರ್ ಹಿಟ್ ಆದ ದಾಖಲೆಯೇ ಇಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ