ಗೋವಾದಲ್ಲಿ ಕೆಜಿಎಫ್ 2 ಸಕ್ಸಸ್ ಮೀಟ್

ಸೋಮವಾರ, 25 ಏಪ್ರಿಲ್ 2022 (08:50 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಪಡೆದ ಭರ್ಜರಿ ಯಶಸ್ಸು ಚಿತ್ರತಂಡದ ಉತ್ಸಾಹ ಹೆಚ್ಚಿಸಿದೆ.

ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು ಸೇರಿದಂತೆ ಇಡೀ ಚಿತ್ರತಂಡ ಗೋವಾದಲ್ಲಿ ಕೆಜಿಎಫ್ 2 ಸಕ್ಸಸ್ ಮೀಟ್ ಆಯೋಜಿಸಿದೆ. ಈ ವೇಳೆ ಚಿತ್ರತಂಡ ಕೇಕ್ ಕತ್ತರಿಸಿ ಸಂಭ್ರಮಾಚರಿಸಿದೆ. ಈ ವೇಳೆ ನಟಿ ರಾಧಿಕಾ ಪಂಡಿತ್ ಕೂಡಾ ಸಾಥ್ ನೀಡಿದ್ದರು.

ಪ್ರಪಂಚದಾದ್ಯಂತ ಬಿಡುಗಡೆಯಾಗಿರುವ ಕೆಜಿಎಫ್ 2 ಸಿನಿಮಾ ಈಗಾಗಲೇ 800 ಕೋಟಿ ರೂ. ಗಳಿಕೆ ದಾಟಿದ್ದು, 1000 ಕೋಟಿಯತ್ತ ದಾಪುಗಾಲಿಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ