ನಟ ಜೆಕೆ ಅಭಿನಯದ ಐರಾವನ್ ತಂಡದಿಂದ ಕೊರೋನಾ ಪೀಡಿತರಿಗೆ ಸಹಾಯ

ಸೋಮವಾರ, 17 ಮೇ 2021 (09:44 IST)
ಬೆಂಗಳೂರು: ನಟ ಜೆಕೆ ಅಲಿಯಾಸ್ ಜಯರಾಮ್ ಕಾರ್ತಿಕ್ ನಾಯಕರಾಗಿ ಅಭಿನಯಿಸಿರುವ ‘ಐರಾವನ್’ ಚಿತ್ರತಂಡ ಕೊರೋನಾದಿಂದ ಸಂಕಷ್ಟಕ್ಕೀಡಾದವರ ನೆರವಿಗೆ ನಿಂತಿದೆ.


ಕೊರೋನಾ ಪೀಡಿತರಿಗಾಗಿ ಆಂಬ್ಯುಲೆನ್ಸ್ ಮತ್ತು ಅಗತ್ಯ ಔಷಧಗಳನ್ನು ಚಿತ್ರತಂಡ ವಿತರಿಸುತ್ತಿದೆ. ನಿರ್ಮಾಪಕ ನಿರಂತರ ಗಣೇಶ್ ನೇತೃತ್ವದಲ್ಲಿ ಈ ಸಮಾಜಮುಖೀ ಕೆಲಸಕ್ಕೆ ಚಿತ್ರತಂಡ ಸಿದ್ಧವಾಗಿದೆ.

10 ಸಾವಿರ ರೂ. ಮೌಲ್ಯದ ಮೆಡಿಕಲ್ ಕಿಟ್ ಮತ್ತು ಒಂದು ಬ್ಯಾಟರಾಯನಪುರ ವ್ಯಾಪ್ತಿಗೆ ಆಂಬ್ಯುಲೆನ್ಸ್ ನ್ನೂ ಕೊರೋನಾ ಪೀಡಿತರ ಸೇವೆಗಾಗಿ ಒದಗಿಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ