ಅಮೆಝೋನ್ ನಲ್ಲಿ ಬಿಡುಗಡೆಯಾದ ಜ್ಯೋತಿಕಾ ಸಿನಿಮಾಗೆ ಪೈರಸಿ ಕಾಟ

ಶನಿವಾರ, 30 ಮೇ 2020 (09:04 IST)
ಚೆನ್ನೈ: ಲಾಕ್ ಡೌನ್ ನಿಂದಾಗಿ ಚಿತ್ರಮಂದಿರಗಳು ತೆರೆಯದೇ ಇರುವ ಕಾರಣಕ್ಕೆ ನಟ ಸೂರ್ಯ ನಿರ್ಮಾಣದ, ಜ್ಯೋತಿಕಾ ಅಭಿನಯದ ತಮಿಳು ಸಿನಿಮಾ ‘ಪೊಣ್ ಮಗಳ್ ವಂದಾಲ್’ ಸಿನಿಮಾ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದೆ.


ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಜತೆಗೆ ಈ ಸಿನಿಮಾವನ್ನು ಥಿಯೇಟರ್ ನಲ್ಲಿ ಬಿಡುಗಡೆ ಮಾಡದ ಬಗ್ಗೆ ವಿತರಕರು, ಚಿತ್ರಮಂದಿರಗಳ ಮಾಲಿಕರಿಗೆ ಅಸಮಾಧಾನವೂ ಉಂಟಾಗಿದೆ.

ಅದರ ನಡುವೆ ಈಗ ಪೈರಸಿ ಕೋರರ ಕಾಟ ಶುರುವಾಗಿದೆ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ತಮಿಳು ರಾಕರ್ಸ್ ಈ ಸಿನಿಮಾದ ಪೈರಸಿ ಕಾಪಿಯನ್ನು ಪ್ರಸಾರ ಮಾಡಿದೆ. ಆಪ್ ನಲ್ಲಿ ಸಿನಿಮಾ ಬಿಡುಗಡೆಯಾಗಿರುವುದರಿಂದ ಪೈರಸಿಕಾರರಿಗೆ ಪೈರಸಿ ಮಾಡಲು ಸುಲಭ ದಾರಿ ಸಿಕ್ಕಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ