ತಡವಾಗಿ ಬಿಡುಗಡೆಯಾದ ಕಾಟೇರ ಟ್ರೈಲರ್: ಲಿಂಕ್ ಇಲ್ಲಿದೆ

ಭಾನುವಾರ, 17 ಡಿಸೆಂಬರ್ 2023 (09:53 IST)
Photo Courtesy: Twitter
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾದ ಟ್ರೈಲರ್ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಲಾಂಚ್ ಮಾಡಲಾಗಿದೆ.

ಹುಬ್ಬಳ್ಳಿಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಪ್ರಿ ರಿಲೀಸ್ ಈವೆಂಟ್ ಮತ್ತು ಟ್ರೈಲರ್ ಲಾಂಚ್ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ನಟಿ ಮಾಲಾಶ್ರೀ, ದರ್ಶನ್, ಧನ್ವೀರ್ ಗೌಡ, ಮೇಘಾ ಶೆಟ್ಟಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಸಿಎಂ ಬಂದು ಲಾಂಚ್ ಮಾಡುವ ಕಾರಣಕ್ಕೆ ಟ್ರೈಲರ್ ಕೊಂಚ ತಡವಾಗಿ ಬಿಡುಗಡೆಯಾಗಿತ್ತು. ಅದಾಗಲೇ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಯಾಕೆ ತಡವಾಗುತ್ತಿದೆ ಎಂದು ಪ್ರಶ್ನಿಸಲಾರಂಭಿಸಿದ್ದರು. ಕೊನೆಗೂ ಬಿಡುಗಡೆಯಾದಾಗ ಖುಷಿಪಟ್ಟರು.

ಟ್ರೈಲರ್ ವೀಕ್ಷಿಸಿದವರು ಆಕ್ಷನ್ ಜೊತೆಗೆ ದರ್ಶನ್ ಉತ್ತರ ಕರ್ನಾಟಕ ಭಾಷೆಯನ್ನು ಮಾತನಾಡಿದ ಶೈಲಿಯನ್ನು ಮೆಚ್ಚಿಕೊಂಡಿದ್ದಾರೆ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ವ್ಯೂ ಪಡೆದುಕೊಂಡಿದೆ. ಡಿಸೆಂಬರ್ 29 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಕಾಟೇರ ಟ್ರೈಲರ್ ಲಿಂಕ್ ಇಲ್ಲಿದೆ:



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ