ಗಳಿಕೆಯಲ್ಲಿ ದಾಖಲೆ ಬರೆಯಲಿರುವ ಕಾಟೇರ

ಬುಧವಾರ, 3 ಜನವರಿ 2024 (12:16 IST)
ಬೆಂಗಳೂರು: ನಟ ದರ್ಶನ್ ಅಭಿನಯಿಸಿರುವ ಕಾಟೇರ ಸಿನಿಮಾ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದೆ.

ಕಾಟೇರ ಸಿನಿಮಾ ಡಿಸೆಂಬರ್ 29 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಿತ್ತು. ಸಿನಿಮಾ ಬಿಡುಗಡೆಯಾದ ಐದೇ ದಿನಕ್ಕೆ ಗಳಿಕೆ 86 ಕೋಟಿ ರೂ.ಗೆ ತಲುಪಿದೆ.

ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆಯಾದ ಸಿನಿಮಾ ಐದೇ ದಿನಗಳಲ್ಲಿ ಇಷ್ಟು ಗಳಿಕೆ ಮಾಡಿದ್ದು ಇದೇ ಮೊದಲು. ಮೊದಲ ದಿನ ಸಿನಿಮಾ 19.75 ಕೋಟಿ ಗಳಿಕೆ ಮಾಡಿತ್ತು. ಭಾನುವಾರ ಗರಿಷ್ಠ 20 ಕೋಟಿ ಗಳಿಕೆ ದಾಟಿತ್ತು. ನಿನ್ನೆ ಐದನೇ ದಿನವೂ ಸಿನಿಮಾದ ಅಬ್ಬರ ನಿಂತಿರಲಿಲ್ಲ.

ಐದನೇ ದಿನಕ್ಕೆ 9.24 ಕೋಟಿ ರೂ. ಗಳಿಸಿತ್ತು. ಈ ಮೂಲಕ ಸಿನಿಮಾ ಗಳಿಕೆ 86.84 ಕೋಟಿ ರೂ.ಗೆ ತಲುಪಿದೆ. ಆ ಮೂಲಕ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿ ಅತೀ ವೇಗವಾಗಿ 100 ಕೋಟಿ ರೂ.ಗಳಿಸಿದ ಅಪ್ಪಟ ಕನ್ನಡಗಳಲ್ಲಿ ಸಿನಿಮಾಗಳಲ್ಲೊಂದು ಎಂಬ ಹೆಮ್ಮೆಗೆ ಪಾತ್ರವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ