ಕಬೀರ್ ಖಾನ್ ನನ್ನ ಬೆಸ್ಟ್ ಫ್ರೆಂಡ್- ಕತ್ರೀನಾ ಕೈಫ್

ಮಂಗಳವಾರ, 26 ಜುಲೈ 2016 (13:54 IST)
ಭಜರಂಗಿ ಬಾಯಿಜಾನ್ ಸಿನಿಮಾ ಖ್ಯಾತಿಯ ನಿರ್ದೇಶಕ ಕಬೀರ್ ಖಾನ್ ಈ  ಹಿಂದೆ ಅನೇಕ ಬಾರಿ ಕತ್ರೀನಾ ಕೈಫ್ ಅವರ ಬಗ್ಗೆ ಮಾತನಾಡಿದ್ದಾರೆ. ಕತ್ರೀನಾ ನನ್ನ ಉತ್ತಮ ಗೆಳತಿ. ಆಕೆಗಾಗಿ ನಾನು ಸಿನಿಮಾ ಮಾಡಬೇಕುಅನ್ನೋದು ನನ್ನ ಬಹುದಿನದ ಆಸೆ ಅಂತಾ ಅವರು ಹೇಳುತ್ತಲೇ ಬಂದಿದ್ದಾರೆ. ಇದೀಗ ಕ್ಯಾಟ್ ಕಬೀರ್ ಖಾನ್ ಬಗ್ಗೆ ಮಾತನಾಡಿದ್ದಾರೆ.
ಹೌದು...ಕತ್ರೀನಾ ಮೊನ್ನೆ ತಾನೇ ಫೇಸ್ ಬುಕ್ ಗೆ ಎಂಟ್ರಿಕೊಟ್ಟಿರೋದು ನಿಮಗೆಲ್ಲಾ ಗೊತ್ತೇ ಇದೆ. ಸಲ್ಮಾನ್ ಖಾನ್ ಸಲಹೆಯಂತೆ ಅವರು ಫೇಸ್ ಬುಕ್ ಗೆ ಎಂಟ್ರಿ ನೀಡಿದ್ದರು. ಎಂಟ್ರಿ ಕೊಟ್ಟಾಗಿನಿಂದ ಅವರು ಫೇಸ್ ಬುಕ್ ನಲ್ಲಿ ಕಮೆಂಟ್ಸ್ , ಪೋಸ್ಟ್ಸ್ , ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇದ್ದಾರೆ. ಇದೀಗ ಕಬೀರ್ ಖಾನ್ ಹಾಗೂ ತಾನು ಜೊತೆಗಿರುವ ಫೋಟೋವೊಂದನ್ನು ಶೇರ್ ಮಾಡಿರುವ ಕಬೀರ್ ಖಾನ್ ಹಾಗೂ ತಾನು ಉತ್ತಮ ಗೆಳೆಯರು, ನಾನು ಅವರಂತಹ ಉತ್ತಮ ಗೆಳೆಯರನ್ನು ಯಾವಾಗಲೂ ಭೇಟಿಯಾಗಿಲ್ಲ. ಅವರಿಗೆ ನನ್ನ ಮಾತುಗಳನ್ನು ಕೇಳೋದು ಅಂದ್ರೆ ಖುಷಿ ಅಂದಿದ್ದಾರೆ.
 
 ಇನ್ನು ಕಬೀರ್ ಖಾನ್ ಹಾಗೂ ಕತ್ರೀನಾ ಕೈಫ್ ಅವರು ಏಕ್ತಾ ಟೈಗರ್ ಹಾಗೂ ನ್ಯೂಯಾರ್ಕ್ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು.ಇನ್ನು ತಮ್ಮ ಮುಂದಿನ ಸಿನಿಮಾದಲ್ಲಿ ಕತ್ರೀನಾ ಕೈಫ್ ಹಾಗೂ ಕಬೀರ ಖಾನ್ ಅವರು ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ ಅಂತಾ ಹೇಳಲಾಗುತ್ತಿದೆ.

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ