ತಾಯಂದಿರ ದಿನ ಮಗನ ಮೊದಲ ಫೋಟೋ ಪ್ರಕಟಿಸಿದ ಕಾಜಲ್ ಅಗರ್ವಾಲ್
ಇತ್ತೀಚೆಗೆ ಗಂಡು ಮಗುವಿನ ತಾಯಿಯಾಗಿರುವ ಕಾಜಲ್ ಇದುವರೆಗೆ ತಮ್ಮ ಮಗನ ಫೋಟೋವನ್ನು ಎಲ್ಲೂ ರಿವೀಲ್ ಮಾಡಿರಲಿಲ್ಲ. ಆದರೆ ಈಗ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪ್ರಕಟಿಸಿದ್ದಾರೆ.
ಮಗ ನೀಲ್ ಕಿಚ್ಲು ಮುಖ ಕಾಣದಂತೆ ಫೋಟೋ ಪ್ರಕಟಿಸಿರುವ ಕಾಜಲ್ ತಮ್ಮ ಮಗನ ಬಗ್ಗೆ ಭಾವುಕ ಸಂದೇಶ ಬರೆದುಕೊಂಡಿದ್ದಾರೆ.