ವಸಿಷ್ಠ ಸಿಂಹ ‘ಕಾಲಚಕ್ರ’ ಸಿನಿಮಾಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಶನಿವಾರ, 10 ಜುಲೈ 2021 (10:31 IST)
ಬೆಂಗಳೂರು: ವಿಶಿಷ್ಟ ಕಂಠದ ನಟ ವಸಿಷ್ಠ ಸಿಂಹ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ ‘ಕಾಲಚಕ್ರ’ ಸಿನಿಮಾ ಅಂತಾರಾಷ್ಟ್ರೀಯ ಪ್ರಶಸ್ತಿಯೊಂದನ್ನು ಗೆದ್ದುಕೊಂಡಿದೆ.


ಕಾಲಚಕ್ರ ಸಿನಿಮಾಗೆ ನ್ಯೂಯಾರ್ಕ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಲಭಿಸಿದೆ. ಈ ಖುಷಿಯ ವಿಚಾರವನ್ನು ಸ್ವತಃ ವಸಿಷ್ಠ ಸಿಂಹ ಹಂಚಿಕೊಂಡಿದ್ದಾರೆ.

ಸುಮಂತ್ ಕ್ರಾಂತಿ ನಿರ್ದೇಶನದ ಸಿನಿಮಾದಲ್ಲಿ ವಸಿಷ್ಠ ಸಿಂಹ ವಿಶಿಷ್ಟ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದರು. ವಸಿಷ್ಠ ಸಿಂಹ ಜೊತೆಗೆ ರಕ್ಷ, ಸುಚೇಂದ್ರ ಪ್ರಸಾದ್, ದೀಪಕ್ ಶೆಟ್ಟಿ ಮತ್ತಿತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ