ತಮಿಳುನಾಡು ಸರ್ಕಾರ ನೆರವಿಗೆ ಒತ್ತಾಯಿಸಿದ ಸಂಕಷ್ಟದಲ್ಲಿರುವ ಕಮಲ್..!
ಗುರುವಾರ, 13 ಜುಲೈ 2017 (08:56 IST)
ತಮಿಳು ಬಿಗ್ ಬಾಸ್ ಶೋ ನಡೆಸಿಕೊಡುತ್ತಿರುವ ಸೂಪರ್ ಸ್ಟಾರ್ ಕಮಲ್ ಹಾಸನ್, ಕೇರಳ ಸರ್ಕಾರದ ರೀತಿ ತಮಿಳುನಾಡು ಸರ್ಕಾರವೂ ತಮ್ಮ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದ್ದಾರೆ.
ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಗಳು ಅಶ್ಲೀ ಶಬ್ದ ಬಳಕೆ ಮತ್ತು ಅರೆಬೆತ್ತಲೆ ಬಟ್ಟೆ ತೊಡುವ ಮೂಲಕ ಹಿಂದೂ ಸಸಂಕೃತಿ ಮತ್ತು ತಮಿಳರ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಆರೋಪಿಸಿರುವ ಹಿಂದೂ ಮಕ್ಕಳ ಕಚ್ಚಿ ಪೊಲೀಸರಿಗೆ ದೂರು ನೀಡಿದ್ದು, ಕಾರ್ಯಕ್ರಮದ ನಿರೂಪಕ ಕಮಲ್ ಹಾಸನ್ ಸೇರಿ 14 ಸ್ಪರ್ಧಿಗಳನ್ನ ಬಂಧಿಸುವಂತೆ ಒತ್ತಾಯಿಸಿದೆ.
ಈ ಬಗ್ಗೆ ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿರುವ ಕಮಲ್ ಹಾಸನ್, ಕೇರಳದ ಎಡಪಕ್ಷಗಳ ಸರ್ಕಾರ ಹೇಗೆ ಲೈಂಗಿಕ ಕಿರುಕುಳಕ್ಕೊಳಗಾದ ನಟಿ ನೆರವಿಗೆ ಧಾವಿಸಿ ದಿಲೀಪ್`ನನ್ನ ಬಂಧಿಸಲಾಗಿದೆಯೋ ಅದೇ ರೀತಿ ತಮಿಳುನಾಡು ಸರ್ಕಾರ ಸಹ ನೆರವಿಗೆ ಬರುವಂತೆ ಕಮಲ್ ಹಾಸನ್ ಒತ್ತಾಯಿಸಿದ್ದಾರೆ. ತಮಿಳುನಾಡು ಸರ್ಕಾರ ಹೆಚ್ಚು ನನ್ನ ನೆರವಿಗೆ ಬಂದಿಲ್ಲವೆಂದು ಕಮಲ್ ಹೇಳಿದ್ದಾರೆ.