Rashmika Mandanna: ಭಾರತೀಯ ಸೇನೆ ಬಗ್ಗೆ ರಶ್ಮಿಕಾ ಮಂದಣ್ಣ ಪೋಸ್ಟ್ ನಿಜಕ್ಕೂ ಗ್ರೇಟ್
ಇನ್ ಸ್ಟಾಗ್ರಾಂನಲ್ಲಿ ಭಾರತೀಯ ಸೇನೆ ಬೆಂಬಲಿಸಿ ಪೋಸ್ಟ್ ಶೇರ್ ಮಾಡಿರುವ ರಶ್ಮಿಕಾ ಮಂದಣ್ಣ ಭಾರತೀಯ ಸೇನೆಗೆ ಜೈ ಎಂದಿದ್ದಾರೆ. ಈ ಪೋಸ್ಟ್ ನಲ್ಲಿ ಎಲ್ಲಾ ದೇಶಗಳಿಗೂ ಉಗ್ರವಾದದ ವಿರುದ್ಧ ಹೋರಾಡುವ ಹಕ್ಕಿದೆ. ಭಾರತದ ಈ ಪ್ರಬಲ ಪ್ರತಿರೋಧವನ್ನು ಬೆಂಬಲಿಸುವವರು ಯುದ್ಧಮೋಹಿಗಳಲ್ಲ.
ಅಪ್ರಚೋದಿತ ಆಕ್ರಮಣಕ್ಕೂ ಸ್ವಯಂ ರಕ್ಷಣೆಗೂ ವ್ಯತ್ಯಾಸವಿದೆ. ಅಮಾಯಕರ ಜೀವ ಉಗ್ರವಾದಕ್ಕೆ ಬಲಿಯಾದಾಗ ಇಂತಹದ್ದೊಂದು ಪ್ರತ್ಯುತ್ತರ ಅಗತ್ಯ. ಶಾಂತಿಯುತವಾಗಿರಬೇಕು ಎಂದರೆ ಮೌನವಾಗಿರಬೇಕು ಎಂದಲ್ಲ. ಪ್ರತ್ಯುತ್ತರ ನೀಡುವ ದೇಶವನ್ನು ಪ್ರಶ್ನಿಸಬೇಡಿ, ಉಗ್ರವಾದ ಪೋಷಿಸುತ್ತಿರುವ ದೇಶವನ್ನುಪ್ರಶ್ನಿಸಿ ಎಂದಿರುವ ಪೋಸ್ಟ್ ಒಂದನ್ನು ರಶ್ಮಿಕಾ ಪೋಸ್ಟ್ ಮಾಡಿದ್ದಾರೆ.