20 ವರ್ಷಗಳ ನಂತರ ರಜನಿ ‘ಬಾಬಾ’ ರಿ ರಿಲೀಸ್ ಆಗಲು ಕಾಂತಾರ ಕಾರಣವಾಗಿದ್ದು ಹೇಗೆ?
ನಾಸ್ತಿಕನಾಗಿದ್ದ ನಾಯಕ ಕೊನೆಗೆ ಆಸ್ತಿಕನಾಗುವ ಮಾಸ್ ಥ‍್ರಿಲ್ಲರ್ ಕತೆಯಿರುವ ಬಾಬ ಸಿನಿಮಾ ಈಗ 20 ವರ್ಷಗಳ ಬಳಿಕ ರಿ ರಿಲೀಸ್ ಆಗುತ್ತಿದೆ. ಇದಕ್ಕಾಗಿ ಈಗಾಗಲೇ ರಜನಿ ವಾಯ್ಸ್ ಓವರ್ ಕೂಡಾ ನೀಡಿದ್ದಾರೆ.
ರಜನಿ, ಮನೀಶ್ ಕೊಯಿರಾಲ ಮುಂತಾದವರು ನಟಿಸಿ ಎ.ಆರ್ ರೆಹಮಾನ್ ಸಂಗೀತ ಸಂಯೋಜಿಸಿದ್ದ ಬಾಬ ರಿ ರಿಲೀಸ್ ಮಾಡುತ್ತಿರುವುದೇಕೆ ಎಂದು ಸ್ವತಃ ನಿರ್ದೇಶಕ ಸುರೇಶ್ ಕೃಷ್ಣನ್ ವಿವರಿಸಿದ್ದಾರೆ.
ಕೆಲವು ದಿನಗಳ ಮೊದಲು ರಜನಿ ಸರ್ ಬಾಬ ಸಿಡಿ ಕಳುಹಿಸಿ ಈಗ ಮತ್ತೆ ಈ ಸಿನಿಮಾ ನೋಡಿ ಎಂದರು. ನಾನು ನೋಡಿದಾಗ ಸಹಜವಾಗಿಯೇ ಖುಷಿಯಾಯಿತು. ಈ ಸಿನಿಮಾವನ್ನು ಈಗ ರಿ ರಿಲೀಸ್ ಮಾಡಿದರೆ ಉತ್ತಮ ಎಂದು ರಜನಿ ಸರ್ ನನಗೆ ಸೂಚಿಸಿದರು. ಇಂದಿನ ಕಾಲಕ್ಕೆ ಅದರಲ್ಲೂ ಜನ ಕಾಂತಾರ, ಕಾರ್ತಿಕೇಯದಂತಹ ಸಿನಿಮಾಗಳನ್ನು ಮೆಚ್ಚಿಕೊಂಡಿರುವಾಗ ಈ ಸಿನಿಮಾವನ್ನು ಈಗ ರಿ ರಿಲೀಸ್ ಮಾಡಿದರೆ ಜನ ಒಪ್ಪಿಕೊಳ್ಳಬಹುದು ಎನಿಸಿತು. ಹೀಗಾಗಿ ರಿ ರಿಲೀಸ್ ಮಾಡಲು ನಿರ್ಧರಿಸಿದೆವು ಎಂದಿದ್ದಾರೆ. ಹೀಗಾಗಿ ಬಾಬ ರಿ ರಿಲೀಸ್ ಮಾಡಲು ಕಾಂತಾರ ಸಿನಿಮಾವೂ ಪ್ರೇರಣೆ ಎನ್ನಬಹುದು.