ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ಬರೆದ ಹರ್ಮನ್ ಪ್ರೀತ್ ಕೌರ್

ಶನಿವಾರ, 25 ಫೆಬ್ರವರಿ 2023 (15:16 IST)
Photo Courtesy: Twitter
ಮುಂಬೈ: ಮಹಿಳಾ ಟಿ20 ವಿಶ್ವಕಪ್ ನ ಸೆಮಿಫೈನಲ್ ಪಂದ್ಯದಲ್ಲಿ ಸೋತು ನಿರಾಸೆ ಅನುಭವಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.

ಕೇವಲ 5 ರನ್ ಗಳಿಂದ ಸೆಮಿಫೈನಲ್ ಸೋತ ಬಳಿಕ ನಾಯಕಿ ಹರ್ಮನ್ ಪ್ರೀತ್ ಕೌರ್ ಕಣ್ಣೀರು ಮಿಡಿದಿದ್ದರು. ಇದೀಗ ಟ್ವಿಟರ್ ಮೂಲಕ ತಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.

‘ವಿಶ್ವಕಪ್ ಕೂಟದಲ್ಲಿ ನಮ್ಮನ್ನು ಬೆಂಬಲಿಸಿದ ಜಗತ್ತಿನಾದ್ಯಂತ ಇರುವ ಅಭಿಮಾನಿಗಳಿಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳಲು ಬಯಸುತ್ತೇನೆ. ಒಬ್ಬ ಅಭಿಮಾನಿಯಾಗಿ ನಿಮ್ಮ ತಂಡ ಸೋಲುವುದನ್ನು ಕಾಣಲು ಕಷ್ಟವಾಗುತ್ತದೆ ಎಂದು ನನಗೆ ಗೊತ್ತು. ಆದರೆ ನಾವು ಮತ್ತೆ ಪುಟಿದೇಳುತ್ತೇವೆ ಎಂದು ನಿಮಗೆ ಭರವಸೆ ಕೊಡಲಷ್ಟೇ ನನ್ನಿಂದ ಈಗ ಸಾಧ‍್ಯ' ಎಂದಿದ್ದಾರೆ ಹರ್ಮನ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ