ಸಂಗೀತ ನಿರ್ದೇಶಕನನ್ನು ಮದುವೆಯಾಗಲಿದ್ದಾರಾ ಕೀರ್ತಿ ಸುರೇಶ್?
ಬುಧವಾರ, 17 ಫೆಬ್ರವರಿ 2021 (10:05 IST)
ಹೈದರಾಬಾದ್ : ನಟಿ ಕೀರ್ತಿ ಸುರೇಶ್ ದಕ್ಷಿಣ ಭಾರತದ ಖ್ಯಾತ ನಟಿ. ಇವರಿಗೆ ಇತ್ತೀಚೆಗೆ ಹಿಂದಿ ಚಿತ್ರರಂಗದಲ್ಲಿ ನಟಿಸಲು ಆಫರ್ ಬರುತ್ತಿದೆ ಎಂಬ ವದಂತಿ ಇತ್ತು. ಆದರೆ ಈ ನಡುವೆ ಇದೀಗ ನಟಿಯ ಮದುವೆಯ ಬಗ್ಗೆ ವದಂತಿ ಹರಿದಾಡುತ್ತಿದೆ ಎನ್ನಲಾಗಿದೆ.
ಸಂಗೀತ ನಿರ್ದೇಶಕ ಅನಿರುದ್ಧ್ ಅವರ ಜೊತೆ ವಿವಾಹವಾಗಲಿದ್ದಾರೆ ಎಂಬ ವದಂತಿ ಇತ್ತು. ಇವರಿಬ್ಬರ ಕ್ಲೋಸ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರಿಂದ ಎಷ್ಟು ಜನರು ಇದು ನಿಜ ಎಂದು ನಂಬಿದ್ದರು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ ಕೀರ್ತಿ ಸುರೇಶ್ ಆಪ್ತರು, ಅನಿರುದ್ಧ ಮತ್ತು ಕೀರ್ತಿ ಆಪ್ತರು. ಅವರಿಬ್ಬರ ನಡುವೆ ಸ್ನೇಹ ಬಿಟ್ಟು ಮತ್ತೇನು ಇಲ್ಲ ಎಂದು ತಿಳಿಸುವ ಮೂಲಕ ಈ ವದಂತಿಗೆ ಬ್ರೇಕ್ ಹಾಕಿದ್ದಾರೆ.