ಕೆಜಿಎಫ್ 2 ಬೆಡಗಿ ಶ್ರೀನಿಧಿ ಶೆಟ್ಟಿ ಬರ್ತ್ ಡೇಗೆ ಭರ್ಜರಿ ಗಿಫ್ಟ್ ಕೊಟ್ಟ ಚಿತ್ರತಂಡ

ಬುಧವಾರ, 21 ಅಕ್ಟೋಬರ್ 2020 (11:53 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾದಲ್ಲಿ ರಾಕಿ ಭಾಯ್ ನ ಪ್ರೀತಿಯ ಹುಡುಗಿ ರೀನಾ ಅಲಿಯಾಸ್ ಶ್ರೀನಿಧಿ ಶೆಟ್ಟಿ ಜನ್ಮದಿನವಾದ ಇಂದು ಚಿತ್ರತಂಡ ಭರ್ಜರಿ ಗಿಫ್ಟ್ ಕೊಟ್ಟಿದೆ.


ಕಪ್ಪು ಸೀರೆಯಲ್ಲಿ ಮಿಂಚುತ್ತಿರುವ ಬೆಡಗಿ ಶ್ರೀನಿಧಿ ಶೆಟ್ಟಿಯ ಹೊಸ ಲುಕ್ ನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಇದುವರೆಗೆ ಕೆಜಿಎಫ್ 2 ನಲ್ಲಿ ರೀನಾ ಪಾತ್ರವನ್ನು ಚಿತ್ರತಂಡ ಅನಾವರಣಗೊಳಿಸಿರಲಿಲ್ಲ. ಇದೀಗ ನಾಯಕಿಯ ಹುಟ್ಟುಹಬ್ಬಕ್ಕೆ ಪೋಸ್ಟರ್ ಮೂಲಕ ಅಭಿಮಾನಿಗಳಿಗೆ ಖುಷಿ ನೀಡಿದೆ. ಮೊನ್ನೆಯಷ್ಟೇ ಮಂಗಳೂರಿನ ಕಡಲತಡಿಯಲ್ಲಿ ಅಂತಿಮ ಹಂತದ ಚಿತ್ರೀಕರಣ ಆರಂಭಿಸಿದ ಚಿತ್ರತಂಡ ಈಗ ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ