ಸ್ಟಾರ್ಟ್ ಆಯ್ತು ಕೆಜಿಎಫ್ 2! ಮುಹೂರ್ತಕ್ಕೆ ಬಂದವರು ಯಾರೆಲ್ಲಾ?
ಮುಹೂರ್ತ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಪ್ರಶಾಂತ್, ನಿರ್ಮಾಪಕ ವಿಜಯ್ ಕಿರಗಂದೂರು, ಭುವನ್ ಗೌಡ, ನಾಯಕಿ ಶ್ರೀನಿಧಿ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು. ಕೆಜಿಎಫ್ ಚಾಪ್ಟರ್ 1 ಕ್ಕೆ ನಿಮ್ಮ ನಿರೀಕ್ಷೆಗೂ ಮೀರಿದ ಬೆಂಬಲ ಸಿಕ್ಕಿದೆ. ಇದೀಗ ಚಾಪ್ಟರ್ 2 ಮೇಲೂ ನಿಮ್ಮ ಆಶೀರ್ವಾದವಿರಲಿ ಎಂದು ಯಶ್ ಮನವಿ ಮಾಡಿದ್ದಾರೆ.