ಕಿಚ್ಚ ಸುದೀಪ್ ಸಿನಿ ಜೀವನಕ್ಕೆ 27 ವರ್ಷ: ಕಿಚ್ಚನ ಭಾವುಕ ಸಂದೇಶ

ಮಂಗಳವಾರ, 31 ಜನವರಿ 2023 (08:40 IST)
Photo Courtesy: Twitter
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ 27 ವರ್ಷಗಳಾಗಿವೆ. ಈ ವಿಶೇಷ ದಿನಕ್ಕಾಗಿ ಸುದೀಪ್ ಅಭಿಮಾನಿಗಳಿಗೆ ಪ್ರೀತಿಯ ಸಂದೇಶ ಬರೆದಿದ್ದಾರೆ.

ಕಿಚ್ಚನ ಅಭಿಮಾನಿಗಳು ಈ ವಿಶೇಷ ದಿನಕ್ಕಾಗಿ ವಿಶೇಷ ಸಿಡಿಪಿ ತಯಾರಿಸಿದ್ದಾರೆ. ಇದನ್ನು ರಿವೀಲ್ ಮಾಡಿರುವ ಸುದೀಪ್ ಭಾವುಕ ಸಂದೇಶ ಬರೆದಿದ್ದಾರೆ.

‘ನನ್ನ ಸುತ್ತಮುತ್ತ ಸಾಕಷ್ಟು ಪ್ರತಿಭಾವಂತರಿದ್ದರೂ ಅವರ ನಡುವೆ 27 ವರ್ಷ ಉಳಿಯಲು ಸಾಧ್ಯವಾಗಿದ್ದು ನನ್ನ ಅದೃಷ್ಟ. ಇದು ನಿಜಕ್ಕೂ ಮರೆಯಲಾರದ ಕ್ಷಣ. ನನಗೆ ಇನ್ನಷ್ಟು ಚೆನ್ನಾಗಿ ಮಾಡಲು ಪ್ರೋತ್ಸಾಹ, ಸ್ಪೂರ್ತಿ ನೀಡಿದ ಎಲ್ಲಾ ಪ್ರತಿಭಾವಂತರಿಗೆ ನನ್ನ ಧನ್ಯವಾದಗಳು’ ಎಂದು ಸುದೀಪ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ