ಎರ್ರಾ ಬಿರ್ರಿ ಗಾಡಿ ಓಡಿಸಿದವರಿಗೆ ಬುದ್ಧಿ ಹೇಳಿದ ಕಿಚ್ಚ ಸುದೀಪ್

ಶುಕ್ರವಾರ, 20 ಡಿಸೆಂಬರ್ 2019 (08:35 IST)
ಬೆಂಗಳೂರು: ಕಿಚ್ಚ ಸುದೀಪ್ ಎಂತಹಾ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿ ಎಂಬುದು ಹಲವು ಬಾರಿ ಸಾಬೀತುಪಡಿಸಿದೆ. ಇದೀಗ ಸುದೀಪ್ ಕುರಿತಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಎರ್ರಾ ಬಿರ್ರಿ ಗಾಡಿ ಓಡಿಸುತ್ತಾ ಹಿಂಬಾಲಿಸುತ್ತಿದ್ದವರಿಗೆ ರಸ್ತೆಯಲ್ಲೇ ಕಾರು ನಿಲ್ಲಿಸಿ ಬುದ್ಧಿ ಹೇಳಿದ ಕಿಚ್ಚನ ವಿಡಿಯೋ ಈಗ ವೈರಲ್ ಆಗಿದೆ.

ಏನು ಗಾಡಿ ಓಡಿಸ್ತೀರಿ? ಹೀಗೆಲ್ಲಾ ಮಾಡಬೇಡಿ. ಸ್ವಲ್ಪ ನೋಡ್ಕೊಂಡು ಹೋಗಿ ಎಂದು ಕಿಚ್ಚ ಬುದ್ಧಿವಾದ ಹೇಳುತ್ತಿದ್ದರೆ ಬೈಕ್ ನಲ್ಲಿರುವ ಯುವಕರು ಕಿಚ್ಚನಿಗೆ ಜೈಕಾರ ಹಾಕುತ್ತಿದ್ದರು. ಕಿಚ್ಚನ ಕಾಳಜಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ