ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ನೋಡಿ ಹಾಡಿ ಹೊಗಳಿದ ಕಿಚ್ಚ ಸುದೀಪ್

ಬುಧವಾರ, 22 ನವೆಂಬರ್ 2023 (13:42 IST)
ಬೆಂಗಳೂರು: ರಕ್ಷಿತ್ ಶೆಟ್ಟಿ ನಾಯಕರಾಗಿರುವ ಸಪ್ತ ಸಾಗರದಾಚೆ ಎಲ್ಲೊ ಸೈಡ್ ಬಿ ಸಿನಿಮಾ ನೋಡಿ ವೈಯಕ್ತಿಕವಾಗಿ ಪ್ರತಿಯೊಬ್ಬರನ್ನೂ ಕಿಚ್ಚ ಸುದೀಪ್ ಹಾಡಿ ಹೊಗಳಿದ್ದಾರೆ.

ರಕ್ಷಿತ್  ತಮ್ಮ ಸಿನಿಮಾಗಳನ್ನು ತಪ್ಪದೇ ತಮ್ಮ ಮೆಚ್ಚಿನ ನಟ ಸುದೀಪ್ ಗೆ ತೋರಿಸುತ್ತಾರೆ. ಇದೀಗ ಸಪ್ತ ಸಾಗರದಾಚೆ ಎ‍ಲ್ಲೋ ಸಿನಿಮಾವನ್ನೂ ಕಿಚ್ಚನಿಗೆ ತೋರಿಸಿದ್ದಾರೆ. ಸಿನಿಮಾ ನೋಡಿದ ಸುದೀಪ್ ರಕ್ಷಿತ್ ರಿಂದ ಹಿಡಿದು ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ಹೊಗಳಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಸುದೀಪ್ ಸಿನಿಮಾದಲ್ಲಿ ನಾಯಕಿ ಹೇಳುವ ಫೇಮಸ್ ಡೈಲಾಗ್ ‘ಕತ್ತೆ’ ಶಬ್ಧ ಬಳಸಿ ಇಡೀ ಚಿತ್ರತಂಡವನ್ನು ಹೊಗಳಿದ್ದಾರೆ. ಇದೊಂದು ಮಾಸ್ಟರ್ ಪೀಸ್ ಸಿನಿಮಾ. ಇಂತಹದ್ದೊಂದು ಸಿನಿಮಾ ನೀಡಿದ್ದಕ್ಕೆ ಧನ್ಯವಾದಗಳು ರಕ್ಷಿತ್ ಎಂದಿದ್ದಾರೆ.

‘ಹೃದಯ ಭಾರವಾಯಿತು. ಅದ್ಭುತ ಅಭಿನಯ, ನಿರ್ದೇಶನ, ಕ್ಯಾಮರಾ ಕೈಚಳಕ.. ಇಂತಹ ಸಿನಿಮಾ ಮಾಡಲು ಧೈರ್ಯ ತೋರಿದ್ದಕ್ಕೆ ನಿಮಗೆ ಅಭಿನಂದನೆಗಳು. ಹೇಮಂತ್ ಒಬ್ಬ ದೂರದರ್ಶಿ, ಅದ್ಭುತ ಟೆಕ್ನಿಷಿಯನ್. ನಿರ್ದೇಶಕನಾಗಿ ಅವರ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಇಂತಹ ಪ್ರಬಲ ಪಾತ್ರವನ್ನು ಸಮತೋಲಿತವಾಗಿ ನಿಭಾಯಿಸಿದ ರುಕ್ಮಿಣಿ ವಸಂತ್ ಗೆ ಅಭಿನಂದನೆಗಳು.  ಒಂದು ಕಾಂಪ್ಲೆಕ್ಸ್ ಕಥಾ ಪಾತ್ರವನ್ನು ನಿಭಾಯಿಸಿದ ಚೈತ್ರಾ ನೀವು ನಿಜಕ್ಕೂ ಅದ್ಭುತ ಎಂದು ಪ್ರತಿಯೊಬ್ಬರನ್ನೂ ಕೊಂಡಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ