ಜೂನ್ 7 ಕ್ಕೆ ಕಿಚ್ಚ ಸುದೀಪ್ ಹೊಸ ಸಿನಿಮಾದ ಟೀಸರ್

ಗುರುವಾರ, 1 ಜೂನ್ 2023 (16:02 IST)
ಬೆಂಗಳೂರು: ಕಿಚ್ಚ ಸುದೀಪ್ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಇದೇ ವಾರ ಉತ್ತರ ಸಿಗಲಿದೆ. ಇದಕ್ಕಾಗಿ ಅಭಿಮಾನಿಗಳೂ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

ಈಗಾಗಲೇ ಕಿಚ್ಚನ ಮುಂದಿನ ಸಿನಿಮಾ ಕಬಾಲಿ ನಿರ್ಮಾಣ ತಂಡದೊಂದಿಗೆ ಎನ್ನುವ ಸುಳಿವು ಸಿಕ್ಕಿದೆ. ಇದೀಗ ಇನ್ನಷ್ಟು ಮಾಹಿತಿಯನ್ನು ಟೀಸರ್ ಮೂಲಕವೇ ಚಿತ್ರತಂಡ ನೀಡಲಿದೆ.

ಸಾಮಾನ್ಯವಾಗಿ ಒಂದಷ್ಟು ಚಿತ್ರೀಕರಣ ಮುಗಿದ ಮೇಲಷ್ಟೇ ಟೀಸರ್ ಬಿಡುಗಡೆ ಮಾಡಲಾಗುತ್ತದೆ. ಆದರೆ ಕಿಚ್ಚನ ಸಿನಿಮಾ ಹೊಸ ಟ್ರೆಂಡ್ ಹುಟ್ಟು ಹಾಕಿದ್ದು ಟೀಸರ್ ಮೂಲಕವೇ ಚಿತ್ರದ ಡೀಟೈಲ್ ಕೊಡಲು ಮುಂದಾಗಿದೆ. ಅಂದ ಹಾಗೆ ಜೂನ್ 7 ಕ್ಕೆ ಸುದೀಪ್ ಮುಂದಿನ ಸಿನಿಮಾದ ಟೀಸರ್ ಹೊರಬೀಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ