ಪ್ರೇಮ ಬರಹ ಸಿನಿಮಾ ನೋಡಿ ಕಿಚ್ಚ ಸುದೀಪ್ ಬಾಯಿಂದ ಬಂತು ಎಂಥಾ ಮಾತು?!

ಶನಿವಾರ, 17 ಫೆಬ್ರವರಿ 2018 (09:21 IST)
ಬೆಂಗಳೂರು: ಕಿರುತೆರೆಯಿಂದ ಹಿರಿತೆರೆಗೆ ಹೋದ ಚಂದನ್ ಮತ್ತು ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ಅಭಿನಯದ ಪ್ರೇಮಬರಹ ಸಿನಿಮಾವನ್ನು ಕಿಚ್ಚ ಸುದೀಪ್ ವೀಕ್ಷಿಸಿದ್ದಾರೆ.
 

ಸದಾ ಹೊಸಬರ ಚಿತ್ರವನ್ನು ವೀಕ್ಷಿಸಿ ಟ್ವಿಟರ್ ನಲ್ಲಿ ಒಂದೆರಡು ಒಳ್ಳೆ ಮಾತು ಹೇಳುವ ಸುದೀಪ ಇಲ್ಲೂ ಪ್ರೇಮ ಬರಹ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

‘ಪ್ರೇಮಬರಹ ಸಿನಿಮಾ ವೀಕ್ಷಿಸುತ್ತಿದ್ದೇನೆ. ಅರ್ಜುನ್ ಸರ್ಜಾ ನಿಮ್ಮ ಸಿನಿಮಾ ನೋಡಲು ಯಾವತ್ತೂ ಖುಷಿಯಾಗುತ್ತದೆ. ಚಿತ್ರ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಸುದೀಪ್ ಹಾರೈಸಿದ್ದಾರೆ. ಇತ್ತೀಚೆಗೆ ಬಿಗ್ ಬಾಸ್ ವೇದಿಕೆಗೂ ಈ ಸಿನಿಮಾ ನಾಯಕ ಚಂದನ್ ಕರೆಸಿಕೊಂಡು ಚಿತ್ರದ ಬಗ್ಗೆ ಸುದೀಪ್ ಕೇಳಿದ್ದರು. ಇದೀಗ ಸ್ವತಃ ಹೋಗಿ ಹರಸಿ ಬಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ