ಮತ್ತೆ ಕಿಚ್ಚ ಸುದೀಪ್ ಬಾಯಲ್ಲಿ ಮನಸ್ಸಿಂದ ಯಾರೂ ಕೆಟ್ಟೋರಲ್ಲ ಹಾಡು

ಶನಿವಾರ, 25 ಜನವರಿ 2020 (08:59 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ವಾಸುಕಿ ವೈಭವ್ ಬರೆದು ಸಂಗೀತ ಸಂಯೋಜಿಸಿದ್ದ ಮನಸ್ಸಿಂದ ಯಾರೂ ಕೆಟ್ಟೋರಲ್ಲ ಹಾಡನ್ನು ಮೆಚ್ಚಿದ್ದ ಕಿಚ್ಚ ಸುದೀಪ್ ತಮ್ಮದೇ ಧ್ವನಿಯಲ್ಲಿ ರೆಕಾರ್ಡಿಂಗ್ ಮಾಡಿ ವಾಸುಕಿ ಬರ್ತ್ ಡೇಗೆ ಉಡುಗೊರೆಯಾಗಿ ನೀಡಿದ್ದರು.


ನನ್ನ ಕೆಲವೇ ಕೆಲವು ಮೆಚ್ಚಿನ ಹಾಡುಗಳಲ್ಲಿ ಇದೂ ಒಂದು ಎಂದಿದ್ದ ಕಿಚ್ಚ ಮುಂದೊಂದು ದಿನ ನಿಮ್ಮ ಜತೆಗೆ ಕೆಲಸ ಮಾಡಲು ಬಯಸುವುದಾಗಿ ವಾಸುಕಿಗೆ ಹೇಳಿದ್ದರು. ಕಿಚ್ಚನ ಧ‍್ವನಿಯಲ್ಲಿ ಮೂಡಿಬಂದ ಈ ಹಾಡು ಈಗಲೂ ಯೂ ಟ್ಯೂಬ್ ನಲ್ಲಿ ಹಿಟ್ ಆಗಿದೆ.

ಈ ಹಾಡನ್ನು ಕಿಚ್ಚ ಮತ್ತೆ ಜನರ ಒತ್ತಾಯದ ಮೇರೆಗೆ ಹಾಡಿದ್ದಾರೆ. ಬೆಂಗಳೂರಿನ ಕ್ರಿಸ್ಟ್ ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಹೋಗಿದ್ದ ಕಿಚ್ಚನಿಗೆ ಈ ಹಾಡನ್ನು ಹಾಡುವಂತೆ ಒತ್ತಾಯ ಮಾಡಲಾಗಿತ್ತು. ಹೀಗಾಗಿ ಮತ್ತೊಮ್ಮೆ ಈ ಹಾಡನ್ನು ಕಿಚ್ಚ ವೇದಿಕೆಯಲ್ಲಿ ಹಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ