ಬಿಗ್ ಬಾಸ್ ಹೊಸ ಸೀಸನ್ ಬಗ್ಗೆ ಮಾಹಿತಿ ಕೊಟ್ಟ ಪರಮೇಶ್ವರ್ ಗುಂಡ್ಕಲ್: ಸುದೀಪ್ ಹೇಳಿದ್ದೇನು?

ಮಂಗಳವಾರ, 2 ಆಗಸ್ಟ್ 2022 (10:01 IST)
ಬೆಂಗಳೂರು: ಆಗಸ್ಟ್ 6 ರಿಂದ ಬಿಗ್ ಬಾಸ್ ಹೊಸ ಸೀಸನ್ ಆರಂಭವಾಗುತ್ತಿದೆ. ಆದರೆ ಈ ಬಾರಿ ಬಿಗ್ ಬಾಸ್ ಕೇವಲ ಒಟಿಟಿಯಲ್ಲಿ ಪ್ರಸಾರವಾಗಲಿದೆ.

ಈ ಬಾರಿ ವೂಟ್ ಆಪ್ ನಲ್ಲಿ ದಿನದ 24 ಗಂಟೆಯೂ ಬಿಗ್ ಬಾಸ್ ಮನೆಯ ದೃಶ್ಯಾವಳಿಗಳನ್ನು ವೀಕ್ಷಿಸಬಹುದಾಗಿದೆ. ಮನೆಯಲ್ಲಿ ನಡೆಯುವ ಘಟನೆಗಳಿಗೂ ಪ್ರಸಾರಕ್ಕೂ ಕೇವಲ ಎರಡು ನಿಮಿಷಗಳ ಅಂತರವಿರಲಿದೆಯಷ್ಟೇ. ಬಿಗ್ ಬಾಸ್ ಒಟಿಟಿಯಲ್ಲಿ ವಿನ್ನರ್ ಇರಲ್ಲ, ಎಲ್ಲರೂ ವಿನ್ನರ್ಸ್ ಆಗಿರುತ್ತಾರೆ. ಪ್ರತೀ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಮಾತುಕತೆ ನಡೆಸಲಿದ್ದಾರೆ. ಒಟ್ಟು 42 ದಿನ ಶೋ ನಡೆಯಲಿದೆ.

ಇದಾದ ಬಳಿಕ ಮಾಮೂಲಾಗಿ ನಡೆಯುವ ಬಿಗ್ ಬಾಸ್ ಹೊಸ ಆವೃತ್ತಿ ಆರಂಭವಾಗಲಿದೆ. ಕನ್ನಡಿಗರ ಪಾಲಿಗೆ ಇದೀಗ ಆರಂಭವಾಗುವ ಒಟಿಟಿ ಆವೃತ್ತಿ ಹೊಸದು. ಸ್ವತಃ ಸುದೀಪ್ ಗೂ ಇದು ಹೊಸ ಅನುಭವ. ಹೀಗಾಗಿ ಸವಾಲು ಎದುರಿಸಲು ಕಾತುರನಾಗಿದ್ದೇನೆ ಎಂದಿದ್ದಾರೆ ಕಿಚ್ಚ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ