ದುಬೈ ಹೋಟೆಲ್ ನಲ್ಲಿ ಕಿಚ್ಚ ಸುದೀಪ್ ಗೆ ಸ್ಪೆಷಲ್ ಟ್ರೀಟ್ ಮೆಂಟ್
ಶನಿವಾರ, 30 ಜನವರಿ 2021 (09:17 IST)
ದುಬೈ: ತಮ್ಮ ಚಿತ್ರ ಜೀವನಕ್ಕೆ 25 ವರ್ಷ ತುಂಬಿದ ಹಿನ್ನಲೆಯಲ್ಲಿ ಕಿಚ್ಚ ಸುದೀಪ್ ಗೆ ದುಬೈನ ಖ್ಯಾತ ರೆಸ್ಟೋರೆಂಟ್ ಸಿಝೆಡ್ಎನ್ ಬುರಾಕ್ ಹೋಟೆಲ್ ನಲ್ಲಿ ಗೌರವ ಸಮರ್ಪಿಸಲಾಗಿದೆ.
ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಲೋಗೋ ಲಾಂಚ್ ಕಾರ್ಯಕ್ರಮಕ್ಕಾಗಿ ದುಬೈಗೆ ತೆರಳಿರುವ ಸುದೀಪ್ ಗೆ ಅಲ್ಲಿ ವಿಶೇಷ ಗೌರವ ನೀಡಲಾಗುತ್ತಿದೆ. ಪ್ರತಿಷ್ಠಿತ ಹೋಟೆಲ್ ನಲ್ಲಿ ಕಿಚ್ಚನಿಗೆ ವಿಶೇಷ ಔತಣಕೂಟ ಏರ್ಪಡಿಸಲಾಗಿತ್ತು. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ಸಲ್ಲಿಸಿರುವ ಭೋಜನ, ಆತಿಥ್ಯ ಎಲ್ಲವೂ ಅದ್ಭುತವಾಗಿತ್ತು ಎಂದು ಧನ್ಯವಾದ ಸಲ್ಲಿಸಿದ್ದಾರೆ.