ಬಿಗ್ ಬಾಸ್ ಗೇ ಕೌಂಟರ್ ಕೊಡಲು ಬಂದ ಕಿಚ್ಚ ಸುದೀಪ್

Krishnaveni K

ಗುರುವಾರ, 2 ಜನವರಿ 2025 (16:11 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ವಾರಂಂತ್ಯಕ್ಕೆ ತಮ್ಮ ಮೆಚ್ಚಿನ ಬಿಗ್ ಬಾಸ್ ಶೋಗೇ ಕೌಂಟರ್ ಕೊಡಲು ಇನ್ನೊಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ಬಿಗ್ ಬಾಸ್ ಶೋವನ್ನು ವೀಕೆಂಡ್ ನಲ್ಲಿ ಕಿಚ್ಚ ನಡೆಸಿಕೊಡುವ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮಕ್ಕೋಸ್ಕರವೇ ಜನ ನೋಡುವವರಿದ್ದಾರೆ. ಈ ಶೋನಿಂದಲೇ ಬಿಗ್ ಬಾಸ್ ಟಿಆರ್ ಪಿ ಕೂಡಾ ಉನ್ನತ ಮಟ್ಟದಲ್ಲಿದೆ.

ಆದರೆ ಈಗ ಕಿಚ್ಚ ಈ ವಾರಂತ್ಯದಲ್ಲಿ ಕಲರ್ಸ್ ವಾಹಿನಿಯ ಪ್ರತಿಸ್ಪರ್ಧಿ ಜೀ ಕನ್ನಡ ವಾಹಿನಿಯಲ್ಲೂ ಏಕಕಾಲಕ್ಕೆ ಕಾಣಿಸಿಕೊಳ್ಳಲಿದ್ದಾರೆ. ಅದೂ ತಮ್ಮ ಪತ್ನಿ, ಮಗಳು ಸಾನ್ವಿ ಜೊತೆಗೆ ಕಿಚ್ಚ ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋ ಸರಿಗಮಪ ಹಾಡಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಚಾನೆಲ್ ಕೂಡಾ ಈ ವಾರ ಭಾರೀ ಪ್ರಚಾರ ನೀಡುತ್ತಿದೆ. ಜನ ಕೂಡಾ ಕಿಚ್ಚ ಅಪರೂಪಕ್ಕೆ ಪತ್ನಿ, ಮಗಳ ಜೊತೆ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದು ನೋಡಲು ಕಾತುರರಾಗಿದ್ದಾರೆ.

ಹೀಗಾಗಿ ಈ ವಾರಂತ್ಯಕ್ಕೆ ಕಿಚ್ಚನ ಒಂದು ಕಾರ್ಯಕ್ರಮದಿಂದಲೇ ಇನ್ನೊಂದು ಕಾರ್ಯಕ್ರಮದ ಟಿಆರ್ ಪಿಗೆ ಹೊಡೆತ ಬೀಳುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಆದರೆ ಒಂದೇ ಒಂದು ಸಮಧಾನಕರ ವಿಚಾರವೆಂದರೆ ಸರಿಗಮಪ ರಾತ್ರಿ 7.30 ಕ್ಕೆ ಶುರುವಾದರೆ ಬಿಗ್ ಬಾಸ್ ರಾತ್ರಿ 9.30 ರಿಂದ ಶುರುವಾಗುತ್ತದೆ. ಹೀಗಾಗಿ ವಾರಂತ್ಯದಲ್ಲಿ ನಿರಂತರವಾಗಿ ಕಿಚ್ಚನನ್ನು ನೋಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ