ದಬಾಂಗ್ 3 ಬಳಿಕ ಮತ್ತೊಂದು ಸಿನಿಮಾಗೆ ಕಿಚ್ಚ ಸುದೀಪ್ ವಿಲನ್?

ಸೋಮವಾರ, 23 ಡಿಸೆಂಬರ್ 2019 (08:48 IST)
ಚೆನ್ನೈ: ದಬಾಂಗ್ 3 ಸಿನಿಮಾದಲ್ಲಿ ಸಲ್ಮಾನ್ ಖಾನ್ ಎದುರು ಖಳನಾಯಕನ ಪಾತ್ರ ಮಾಡಿ ಭಾರೀ ಮೆಚ್ಚುಗೆಗೆ ಪಾತ್ರವಾಗಿರುವ  ಕಿಚ್ಚ ಸುದೀಪ್ ಗೆ ಈಗ ಮತ್ತೊಂದು ಅಂತಹದ್ದೇ ಆಫರ್ ಬಂದಿದೆ ಎನ್ನಲಾಗಿದೆ.


ತಮಿಳು ನಟ ಸಿಂಬು ಅಭಿನಯದ ಸಿನಿಮಾವೊಂದರಲ್ಲಿ ವಿಲನ್ ಪಾತ್ರ ಮಾಡಲು ಸುದೀಪ್ ಗೆ ಆಫರ್ ನೀಡಲಾಗಿದೆ ಎನ್ನಲಾಗಿದೆ. ವೆಂಕಟ್ ಪ್ರಭು ಅವರ ‘ಮಾನಾಡು’ ಸಿನಿಮಾದಲ್ಲಿ ಸಿಂಬುಗೆ ಖಳನಾಗಿ ಸುದೀಪ್ ರನ್ನು ಕರೆತರಲು ಚಿತ್ರತಂಡ ಪ್ರಯತ್ನ ನಡೆಸಿದೆ ಎನ್ನಲಾಗಿದೆ.

ಆದರೆ ಇನ್ನೂ ಸುದೀಪ್ ಸ್ಕ್ರಿಪ್ಟ್ ಕೇಳಿಲ್ಲ. ಹಾಗೂ ಸಿನಿಮಾದಲ್ಲಿ ನಟಿಸುವುದಕ್ಕೆ ಒಪ್ಪಿಗೆಯನ್ನೂ ನೀಡಿಲ್ಲ ಎನ್ನಲಾಗಿದೆ. ಉತ್ತಮ ಕತೆ, ಚಿತ್ರತಂಡವಿದ್ದರೆ ವಿಲನ್ ಪಾತ್ರವಾದರೂ ಮಾಡಲು ನನಗೆ ಹಿಂಜರಿಕೆಯಿಲ್ಲ ಎಂದು ಸುದೀಪ್ ಹೇಳಿದ್ದರು. ಹೀಗಾಗಿ ತಮಿಳು ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಲಿದ್ದಾರೆಯೇ ಎಂದು ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ