ವಿಶ್ವನಾಥನ್ ಆನಂದ್ ಜೊತೆ ಕಿಚ್ಚ ಸುದೀಪ್ ಚೆಸ್ ಪಂದ್ಯ

ಶನಿವಾರ, 12 ಜೂನ್ 2021 (09:33 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಜೊತೆಗೆ ಚೆಸ್ ಪಂದ್ಯವಾಡಲಿದೆ.


ಕೇವಲ ಸುದೀಪ್ ಮಾತ್ರವಲ್ಲ, ಏಕಕಾಲಕ್ಕೆ ಹಲವರೊಂದಿಗೆ ವಿಶಿ ಆನಂದ್ ಚೆಸ್ ಆಡಲಿದ್ದಾರೆ. ಕೊರೋನಾ ಪರಿಹಾರ ನಿಧಿಗೆ ಹಣ ಸಂಗ್ರಹಿಸಲು ಸಹಾಯಾರ್ಥ ಪಂದ್ಯ ಆಯೋಜಿಸಲಾಗಿದೆ.

ಇದರಲ್ಲಿ ಸುದೀಪ್ ಅಲ್ಲದೆ, ಕ್ರಿಕೆಟಿಗ ಯಜುವೇಂದ್ರ ಚಾಹಲ್, ನಟ ರಿತೇಶ್ ದೇಶ್ ಮುಖ್,  ಗಾಯಕ ಅರ್ಜಿತ್ ಸಿಂಗ್, ಅನನ್ಯಾ ಬಿರ್ಲಾ ಮುಂತಾದ ಸೆಲೆಬ್ರಿಟಿಗಳೂ ಆಟವಾಡಲಿದ್ದಾರೆ. ಇಂದು ಸಂಜೆ 5 ಗಂಟೆಯಿಂದ ಚೆಸ್.ಕಾಮ್ ಅಧಿಕೃತ ಯೂ ಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ